ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಇತ್ತೀಚೆಗೆ ಸೆರೆ ಸಿಕ್ಕ ಮೊಸಳೆಯನ್ನು ಕಟ್ಟಿ ಹಾಕಿ ಹೊತ್ತೊಯ್ಯುತ್ತಿರುವ ಯುವಕ. 
ಜಿಲ್ಲೆ

ಮೀನು ಎಂದು ಮೊಸಳೆ ಹಿಡಿದ ಯುವಕರು

ನಿಪ್ಪಾಣಿ: ದೂಧಗಂಗಾ ನದಿಯಲ್ಲಿ ಮೀನು ಹಿಡಿಯುವ ವೇಳೆ ಗಾಳಕ್ಕೆ ಸಿಕ್ಕ ಮೊಸಳೆ ಹಿಡಿದ ಘಟನೆ ತಾಲೂಕಿನ ಕಾರದಗಾದಲ್ಲಿ ಗುರುವಾರ ನಡೆದಿದೆ. ಮೊಸಳೆ 6 ಅಡಿ ಉದ್ದವಿದೆ. ಹಲವು ದಿನಗಳಿಂದ ದೂಧಗಂಗಾ ನದಿದಡದಲ್ಲಿ ಕಾಣಿಸಿಕೊಂಡಿತ್ತು. ಇದರಿಂದ ಜನ ಭೀತಿಗೊಂಡಿದ್ದರು.

ಗ್ರಾಮದ ಬಂಡು ಗಾವಡೆ ಎಂಬಾತ ನದಿಯಲ್ಲಿ ಮೀನು ಹಿಡಿಯಲು ಹೋದ ವೇಳೆ ಗಾಳಕ್ಕೆ ಮೊಸಳೆ ಸಿಲುಕಿದೆ. ದೊಡ್ಡ ಮೀನು ಬಲೆಗೆ ಬಿದ್ದಿದೆ ಎಂದು ಗಾಳವನ್ನು ಮೇಲೆತ್ತಿದಾಗ ಮೊಸಳೆ ಎಂದು ಗೊತ್ತಾಗಿದೆ. ತಕ್ಷಣ ಬಂಡು ಸ್ನೇಹಿತರಾದ ಕಿಶನ್ ಮಧಾಳೆ, ಸುಶಾಂತ ಶಿಂಗೆ, ನಾಗೇಶ ಕಾಂಬಳೆ, ಸಾತಪ್ಪ ಡಾಂಗೆ, ನಾಗೇಶ ಕರಾಳೆ, ಭಾವುಸಾಹೇಬ ಗಾವಡೆ ಮೊದಲಾದವರನ್ನು ಕರೆಯಿಸಿ ಆ ಮೊಸಳೆ ಹಿಡಿದು ಕಟ್ಟಿಹಾಕಿ ಅರಣ್ಯ ಇಲಾಖೆಗೆ ಒಪ್ಪಿಸಿದರು.