ಉಪ್ಪಿನಬೆಟಗೇರಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಮಂಗಳವಾರ ಆಗಮಿಸಿದ್ದ ತಹಸೀಲ್ದಾರ್ ಡಾ. ಸಂತೋಷ ಬಿರಾದಾರ ಅವರು, ಸರ್ಕಾರದ ಆದೇಶಕ್ಕೆ ಜನಸ್ಪಂದನೆ, ಹೊಸ ಬಸ್ ನಿಲ್ದಾಣ, ಮಾರá-ಕಟ್ಟೆ, ಅಂಗಡಿಮುಂಗಟ್ಟು, ಜನ ಸಂಚಾರವನ್ನು ಪರಿಶೀಲಿಸಿದರು.
ಬಸ್ ನಿಲ್ದಾಣ ಬಳಿ ಎರಡು ದ್ವಿಚಕ್ರ ವಾಹನಗಳಲ್ಲಿ ತೆರಳá-ತ್ತಿದ್ದ ನಾಲ್ವರನ್ನು ತಡೆದು ತರಾಟೆಗೆ ತೆಗೆದá-ಕೊಂಡರು. ಆಗ ವಾಹನ ಸವಾರರು ಧಾರವಾಡದಿಂದ ಮೀನು ಹಿಡಿಯಲು ಬಂದಿದ್ದಾಗಿ ತಿಳಿಸಿದರು. ಅವರಿಗೆ ಬೈಕ್ ಕೊಡಬೇಡಿ, ನಡೆದುಕೊಂಡೇ ಅವರು ಧಾರವಾಡಕ್ಕೆ ಹೋಗಲಿ. ಅವರ ಫೋಟೋ ತೆಗೆದುಕೊಳ್ಳಿ ಎಂದು ತಹಸೀಲ್ದಾರರು ಸ್ಥಳದಲ್ಲಿದ್ದ ಪೊಲೀಸರಿಗೆ ಸೂಚಿಸಿದರು. ಆಗ ಸವಾರರು ಮತ್ತೊಮ್ಮೆ ಇತ್ತ ಸುಳಿಯುವುದಿಲ್ಲ, ಕ್ಷಮಿಸಿ ಎಂದಾಗ ಅವರಿಗೆ ವಾಹನಗಳನ್ನು ಕೊಟ್ಟು ಕಳುಹಿಸಿದರು.
ಬಳಿಕ ಹೊಸ ಬಸ್ ನಿಲ್ದಾಣ ಬಳಿ ಗಟಾರ್ಗಳನ್ನು ಪರಿಶೀಲಿಸಿದ ತಹಸೀಲ್ದಾರ್, ಗ್ರಾ.ಪಂ. ಸಿಬ್ಬಂದಿಗೆ ಗಟಾರ್ಗಳನ್ನು ಸ್ವಚ್ಛಗೊಳಿಸಿ ಕ್ರಿಮಿನಾಶಕ ಸಿಂಪಡಿಸುವಂತೆ ಸಲಹೆ ನೀಡಿದರು. ಕಂದಾಯ ನಿರೀಕ್ಷಕ ರಮೇಶ ಬಂಡಿ, ಗ್ರಾಮ ಲೆಕ್ಕಾಧಿಕಾರಿ ರಾಮಚಂದ್ರ ನಾಯಕ, ಗರಗ ಪೊಲೀಸ್ ಠಾಣೆಯ ಕುಮಾರ ನಾಯಕ, ಇತರರಿದ್ದರು.
ಮಾಸ್ಕ್ ಧರಿಸದ ತಹಸೀಲ್ದಾರ್!: ಧಾರವಾಡ ತಹಸೀಲ್ದಾರ್ ಡಾ. ಸಂತೋಷ ಬಿರಾದಾರ ಅವರು ಮಾಸ್ಕ್ ಧರಿಸದೇ ಉಪ್ಪಿನಬೆಟಗೇರಿ ಗ್ರಾಮದಲ್ಲಿ ಸಂಚರಿಸಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು.