ಜಿಲ್ಲೆ

ಮಿಲಿಟರಿ ಮದ್ಯ ಅಕ್ರಮ ಮಾರಾಟ: ದಾಳಿ

reportermys

ಹಾಸನ : ಮಿಲಿಟರಿ ಕ್ಯಾಂಟೀನ್‌ನಲ್ಲಿ ದೊರೆಯುವ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಹಾಸನ ನಗರದ ವಿವೇಕನಗರ ಬಡಾವಣೆಯಲ್ಲಿರುವ ರುದ್ರೇಶ್ ಎಂಬುವರ ಮನೆಯಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿ 67,778 ರೂ. ಬೆಲೆಯ 21 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತ ಡಿ. ನಾಗೇಶ್ ಕುಮಾರ್ ನಿರ್ದೇಶನದಂತೆ ಅಬಕಾರಿ ಉಪ ಅಧೀಕ್ಷಕ ಜಿ.ಬಿ ವಿಜಯ್ ಕುಮಾರ್‌ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ಎಂ.ಕೆ ಕೇಶವಮೂರ್ತಿ ಹಾಗೂ ಸಿಬ್ಬಂದಿ ಸೆ. 3 ರಂದು ಈ ಕಾರ್ಯಾಚರಣೆ ನಡೆಸಿ,

ಪ್ರೀಮಿಯಂ ಬ್ರಾಂಡ್‌ಗಳಾದ ಬ್ಲಾಕ್ ಅಂಡ್ ವೈಟ್, 100 ಪೈಪರ್ ಮತ್ತು ಬ್ಲೆಂಡರ್ಸ್‌ ಪ್ರೈಡ್ ಎಂಬ ಲೇಬಲ್‌ವುಳ್ಳ ಒಟ್ಟು 28 ಬಾಟಲಿ ಮದ್ಯ ವಶಪಡಿಸಿಕೊಂಡಿದ್ದಾರೆ .

ಆರೋಪಿಯು ತಲೆ ಮರೆಸಿಕೊಂಡಿದ್ದಾನೆ. ಮಿಲಿಟರಿ ಸಿಬ್ಬಂದಿಗೆ ಹಂಚಿಕೆಯಾಗುವ ಮದ್ಯವನ್ನು ಯಾವುದೇ ವ್ಯಕ್ತಿ ಅಕ್ರಮವಾಗಿ ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದು ಕಾನೂನು ರೀತಿ ಅಪರಾಧವಾಗಿದೆ.

ಈ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಮೈಕೆಲ್ ಜಾರ್ಜ್ ಹಾಗೂ ಅಬಕಾರಿ ಉಪ ನಿರೀಕ್ಷಕರಾದ ಹನುಮಂತಯ್ಯ ಹೆಚ್.ಎಲ್ ಮತ್ತು ಈ.ಟಿ.ಚಂದ್ರಪ್ಪ, ಹಾಗೂ ಸಿಬ್ಬಂದಿ ಟಿ.ಪಿ.ಮಂಜುನಾಥ್, ಜಯಶೀಲಾ, ಕೃಷ್ಣಾ ನಾಯಕ್ ಮತ್ತು ವಾಹನ ಚಾಲಕ ರವಿ ಭಾಗವಹಿಸಿದ್ದರು.