ಕಲಬುರಗಿ: ವಿದ್ಯಾ ನಗರದಲ್ಲಿನ ಮಿಲಿಂದ ಪ್ರೌಢ ಶಾಲೆ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಭಾಟನೆ ಹಾಗೂ ಗುರುವಂದನಾ ಕಾರ್ಯಕ್ರಮ ಜ.೧೨ರಂದು ಬೆಳಗ್ಗೆ ೧೦.೩೦ಕ್ಕೆ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಭಜರಂಗಸಿAಗ್ ಚವ್ಹಾಣ್ ತಿಳಿಸಿದರು. ಕರ್ನಾಟಕ ಪೀಪಲ್ಸ್ ಎಜ್ಯುಕೇಶನ ಸೊಸೈಟಿ ಅಧ್ಯಕ್ಷ, ಸಂಸದ ರಾಧಾಕೃಷ್ಣ ದೊಡ್ಡಮನಿ, ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ, ಆಡಳಿತಾಧಿಕಾರಿ ಡಾ.ಚಂದ್ರಶೇಖರ ಶೀಲವಂತ ಮುಖ್ಯ ಅತಿಥಿಯಾಗಿದ್ದು, ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಲಿದ್ದಾರೆ. ಡಾ. ಚಂದ್ರಶೇಖರ, ಸಚಿನ ಶಿರವಾಳ ಭಾಗವಹಿಸಲಿದ್ದು, ಮದುಕರ ಇ. ಡಾಂಗೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಅಜೀತಕುಮಾರ ಶಿಂಧೆ, ರಮೇಶ ಚಿಮ್ಮಾಇದ್ಲಾಯಿ, ಸಂಜೀವಕುಮಾರ ಅಷ್ಠಗಿ ಇತರರಿದ್ದರು.