ಕೊಡೇಕಲ್ : ನಮ್ಮ ಅಮೂಲ್ಯ ಸಂಪತ್ತಾದ ನೀರನ್ನು ಸಂರಕ್ಷಿಸದಿದ್ದಲ್ಲಿ ಭವಿಷ್ಯದಲ್ಲಿ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಮುಖ್ಯಗುರು ವೀರನಗೌಡ ಪಾಟೀಲ್ ಹೇಳಿದರು.
ತೀರ್ಥ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಜಲಜೀವನ ಮಿಷನ್ ಯೋಜನೆಯಲ್ಲಿ ನೀರಿನ ಸದ್ಬಳಕೆ ಕುರಿತು ಗುರುವಾರ ಹಮ್ಮಿಕೊಂಡ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ನೀರು ವಿನಾಃಕಾರಣ ಪೋಲಾಗದಂತೆ ಜಾಗೃತಿ ವಹಿಸಬೇಕು ಎಂದರು.
ಪ್ರತಿ ಮನೆಗೆ ಕರ‍್ಯಾತ್ಮಕ ನಲ್ಲಿ ಸಂಪರ್ಕ ಕಲ್ಪಿಸುವುದು ಜಲಜೀವನ ಮಿಷನ್ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ತಾವು ಬಳಕೆ ಮಾಡಿದ ನೀರಿಗೆ ಕರ ತುಂಬುವುದರಿAದ ಪೋಲಾಗುವಿಕೆ ತಪ್ಪುತ್ತದೆ ಎಂದು ಹೇಳಿದರು.
ಶಾಲಾ ಮಕ್ಕಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಯೋಜನೆ ಕುರಿತು ಘೋಷಣೆ ಕೂಗುತ್ತಾ ಪ್ರಭಾತ್ ಫೇರಿ ಮೂಲಕ ಜಾಗೃತಿ ಜಾಥಾ ನಡೆಯಿತು. ಪಿಡಿಒ ಈರಮ್ಮ, ಜಲಜೀವನ ಮಿಷನ್‌ನ ಸಾಮಾಜಿಕ ತಜ್ಞ ದೇವರಾಜ ನಾಯಕ, ಕೃಷ್ಣ ದೋರಿ, ಎಂ.ಕೆ.ಪಟೇಲ್, ಹಣಮಂತ್ರಾಯ, ಈರಣ್ಣ ಇತರರಿದ್ದರು.