ಜಿಲ್ಲೆ

ಮಾಹಿತಿಗಾಗಿ ಹೆಲ್ಪ್ ಡೆಸ್ಕ್ ಪ್ರಾರಂಭ

ಚಾಮರಾಜನಗರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ (ಎಂ.ಎಸ್.ಎಂ.ಇ) ಕೈಗಾರಿಕೆಗಳನ್ನು ಸ್ಥಾಪಿಸುವ ಸಲುವಾಗಿ ಬ್ಯಾಂಕ್ ಸಾಲದ ಮಾಹಿತಿಯನ್ನು ನೀಡಲು ಹೆಲ್ಪ್ ಡೆಸ್ಕ್ ಅನ್ನು ನಗರದ ಜಿಲ್ಲಾಡಳಿತ ಭವನದ 3ನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 331ರಲ್ಲಿ ಪ್ರಾರಂಭಿಸಲಾಗಿದೆ.

ಆಸಕ್ತ ಉದ್ದಿಮೆದಾರರು ಹೆಲ್ಪ್ ಡೆಸ್ಕ್ ಸಹಾಯವಾಣಿ ಸಂಖ್ಯೆ: 08226-224915, 224916 ಅಥವಾ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ವಿಜಯ್ ಕುಮಾರ್ ಅವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.