ಶಿರಸಿ: ಕೋವಿಡ್-19 ಸೋಂಕು ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. ಆದರೆ, ಕೆಲವರು ಮಾಸ್ಕ್ ಇಲ್ಲದೆ ಓಡಾಡುತ್ತಿದ್ದು ಅಂಥವರಿಗೆ ಗುರುವಾರ ಸಿಪಿಐ ಪ್ರದೀಪ ಬಿ.ಯು., ನಗರ ಠಾಣೆ ಪಿಎಸ್ಐ ಶಿವಾನಂದ ದಂಡ ಹಾಕಿ ಎಚ್ಚರಿಕೆ ನೀಡಿದ್ದಾರೆ. ತರಕಾರಿ ಮಾರುಕಟ್ಟೆ, ನಿಲೇಕಣಿ ಮೀನು ಮಾರುಕಟ್ಟೆ, ಸಿ.ಪಿ. ಬಜಾರ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದ ಒಟ್ಟು 50 ಜನರ ವಿರುದ್ಧ ಪ್ರಕರಣ ದಾಖಲಿಸಿ 5900 ರೂಪಾಯಿ ದಂಡ ವಿಧಿಸಿದ್ದಾರೆ. ನಿಯಮ ಉಲ್ಲಂಘಿಸಿ ನಿರ್ಲಕ್ಷತೆ ವಹಿಸಿದಲ್ಲಿ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಿಪಿಐ ಪ್ರದೀಪ ಬಿ.ಯು. ಎಚ್ಚರಿಕೆ ನೀಡಿದ್ದಾರೆ.
್ಞೊನ್ನಾವರ ಪಟ್ಟಣದ ವಿವಿಧ ಭಾಗಗಳಲ್ಲಿ ಪರಸ್ಪರ ಅಂತರ ಮರೆತು, ಮಾಸ್ಕ್ ಧರಿಸದೇ ವ್ಯವಹರಿಸುತ್ತಿದ್ದವರಿಗೆ ಗುರುವಾರ ಹೊನ್ನಾವರ ಪೊಲೀಸರು ದಂಡ ವಸೂಲಿ ಮಾಡಿ ಎಚ್ಚರಿಕೆ ನೀಡಿದರು. ಪಟ್ಟಣದ ಬಜಾರ್ ರಸ್ತೆ, ಶರಾವತಿ ವೃತ್ತದ ಸುತ್ತಮುತ್ತಲಿನ ಭಾಗದಲ್ಲಿ ಸಿಪಿಐ ವಸಂತ ಆಚಾರಿ, ಪಿಎಸ್ಐ ಶಶಿಕುಮಾರ, ಕ್ರೈಂ ಪಿಎಸ್ಐ ಸಾವಿತ್ರಿ ನಾಯ್ಕ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಮಾಸ್ಕ ಧರಿಸದೆ ತಿರುಗಾಡುತ್ತಿದ್ದ 40ಕ್ಕೂ ಅಧಿಕ ಜನರಿಗೆ ಎಚ್ಚರಿಕೆ ನೀಡಿ ಒಟ್ಟು 8 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ.
್ಞಾಂಡೇಲಿ ನಗರದಲ್ಲಿ ಮಾಸ್ಕ್ ಧರಿಸದವರಿಂದ ನಗರಸಭೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಗುರುವಾರ 5,400 ರೂ. ದಂಡ ವಸೂಲಿ ಮಾಡಿದ್ದಾರೆ. ಇಲ್ಲಿಯವರೆಗೆ ಒಟ್ಟು 26100 ರೂ. ದಂಡ ಆಕರಿಸಿದೆ.