ಜಿಲ್ಲೆ

ಮಾಸಿಕ ಗಮಕ ಕಾರ್ಯಕ್ರಮ 24ರಂದು

ಚಿತ್ರದುರ್ಗ: ನಗರದ ಗಮಕ ಕಲಾಭಿಮಾನಿಗಳ ಸಂಘದಿಂದ ಮಾಸಿಕ ಗಮಕ ವಾಚನ ವ್ಯಾಖ್ಯಾನ ಸಂಭ್ರಮ ಕಾರ‌್ಯಕ್ರಮವನ್ನು ಆ.24ರ ಸಂಜೆ 6 ಗಂಟೆಗೆ ವಿಪಿ ಬಡಾವಣೆ 3ನೇ ಕ್ರಾಸ್‌ನಲ್ಲಿರುವ ವಿಶ್ವ ಹಿಂದು ಪರಿಷತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಶಿಕ್ಷಕಿ ವಿದುಷಿ ಸುಮಾ ಗಮಕ ವಾಚಿಸಲಿದ್ದಾರೆ. ವಿದ್ವಾನ್ ಜಯಸಿಂಹ ವ್ಯಾಖ್ಯಾನ ನಡೆಸಿಕೊಡಲಿದ್ದಾರೆ. ಕುಮಾರವ್ಯಾಸ ಭಾರತ ಉದ್ಯೋಗ ಪರ್ವದಿಂದ ಶ್ರೀ ವಿಶ್ವರೂಪ ದರ್ಶನ ಮುಖ್ಯಕಥಾಭಾಗದ ಆಯ್ದ ಭಾಗದ ವಾಚನ-ವ್ಯಾಖ್ಯಾನ ನಡೆಯಲಿದೆ. ಲೇಖಕಿ ಡಾ.ತಾರಿಣಿ ಶುಭದಾಯಿನಿ ಮತ್ತಿತರರು ಉಪಸ್ಥಿತರಿರುತ್ತಾರೆ.
=