ಬಾಗಲಕೋಟೆ ಜಿಲ್ಲಾಡಳಿತ ಭವನ ಭವನ ಮುಖ್ಯದ್ವಾರ ಎದುರು ಮಂಗಳವಾರ ಹೊರ ಗುತ್ತಿಗೆ ನೌಕರರು ಅನಿಽðಷ್ಠಾವಽ ಹೋರಾಟ ಆರಂಭಿಸಿದ್ದಾರೆ.  
ಜಿಲ್ಲೆ

ಮಾಸಿಕ ಕನಿಷ್ಠ ೩೧ ಸಾವಿರ ರೂ. ವೇತನ ನೀಡಿ

ಬಾಗಲಕೋಟೆ: ತಿಂಗಳಿಗೆ ಕನಿಷ್ಠ ೩೧ ಸಾವಿರ ರೂ. ವೇತನ ನೀಡಬೇಕು. ಇಲಾಖೆಯಿಂದ ನೇರವಾಗಿ ವೇತನ ಪಾವತಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಭವನ ಮುಖ್ಯದ್ವಾರ ಎದುರು ಮಂಗಳವಾರ ಹೊರ ಗುತ್ತಿಗೆ ನೌಕರರು ಅನಿಽðಷ್ಠಾವಽ ಹೋರಾಟ ಆರಂಭಿಸಿದ್ದಾರೆ.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ನೌಕರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಽಕಾರಿ ಜಾನಕಿ ಕೆ.ಎಂ. ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಹಿಂದುಳಿದ ವರ್ಗ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಇಲಾಖೆ ಅಡಿಯಲ್ಲಿ ಬರುವ ವಿವಿಧ ವಸತಿ ನಿಲಯಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸಾವಿರಾರು ಜನ ಕೆಲಸ ಮಾಡುತ್ತಿದ್ದಾರೆ. ಆದರೇ ಸಾಕಷ್ಟು ನೋವು-ಸಂಕಟದಿAದ ಜೀವನ ಸಾಗಿಸುವಂತಾಗಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿವೃತ್ತಿ ವರೆಗೂ ಭದ್ರತೆ ಒದಗಿಸಬೇಕು, ನೇರವಾಗಿ ಇಲಾಖೆಯಿಂದ ವೇತನ ನೀಡಬೇಕು, ಕಾರ್ಮಿಕ ಕಾನೂನು ಪ್ರಕಾರ ಕಡ್ಡಾಯವಾಗಿ ವಾರಕ್ಕೆ ಒಂದು ದಿನ ರಜೆ ನೀಡಬೇಕು, ಕೆಲಸ ಸಮಯ ನಿಗಽ ಮಾಡಬೇಕು, ಬೀದರ ಜಿಲ್ಲೆಯ ಮಾದರಿ ಜಿಲ್ಲಾ ಕಾರ್ಮಿಕ ವಿವಿದೋದ್ದೇಶ ಸಹಕಾರಿ ಸಂಘಗಳನ್ನು ರಾಜ್ಯವ್ಯಾಪಿ ವಿಸ್ತರಿಸಬೇಕು, ಗುತ್ತಿಗೆದಾರರು ಸಂಬಳದ ಚೀಟಿ, ನೇಮಕಾತಿ ಆದೇಶ ಪತ್ರ, ಐಡಿ ಕಾರ್ಡ್, ಸರ್ವೀಸ್ ಸರ್ಟಿಫಿಕೇಟ್, ಇಎಸ್‌ಐ-ಪಿಎ-À ಹಣ ಪಾವತಿಸಿದ ಕುರಿತು ರಶೀದಿ ಕೊಡಬೇಕು ಎಂದು ಆಗ್ರಹಿಸಿದರು.

ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಿಬ್ಬಂದಿಗಳ ಸಂಖ್ಯೆ ಕಡಿತ ಮಾಡಿರುವ ಆದೇಶ ರದ್ದಾಗಬೇಕು, ೫೦ ವಿದ್ಯಾರ್ಥಿಗಳಿಗೆ ೩ ಜನ ಸಿಬ್ಬಂದಿಯAತೆ ಹಿಂದಿನ ಪದ್ಧತಿ ಮುಂದುವರೆಸಬೇಕು, ಪ್ರತಿ ತಿಂಗಳು ೫ ತಾರೀಖಿನ ಒಳಗಾಗಿ ಸಂಬಳ ಕೊಡಬೇಕು,ಬಾಕಿ ಇರುವ ಸಂಬಳವನ್ನು ತಕ್ಷಣ ಬಿಡುಗಡೆಗೊಳಿಸಬೇಕು, ನಿವೃತ್ತಿ ನಂತರ ಜೀವನ ನಿರ್ವಹಣೆಗೆ ೧೦ ಲಕ್ಷ ರೂ. ಪರಿಹಾರ ಕೊಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ರಾಜೇಶ ದೇಶಪಾಂಡೆ, ಜಂಟಿ ಕಾರ್ಯದರ್ಶಿ ಹುಲಗಪ್ಪ ಚಲವಾದಿ, ಆನಂದ ಹಾದಿಮನಿ, ಎಸ್.ವೈ.ಕಂಬಾರ, ಗೀತಾ ಡೊಳ್ಳಿನ, ಉಮ್ಮಕ್ಕ ಉಣಚಗಿ ಇತರರು ಇದ್ದರು.