ಪಾ.ಶ್ರೀ.ಅನಂತರಾಮ್ ಕೋಲಾರ
ಎರಡು ವರ್ಷಗಳ ನಂತರ ಮಾವು ಮೇಳ ನಡೆಸಲು ಸರ್ಕಾರ ಅನುಮತಿ ನೀಡಿದೆಯಾದರೂ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿದೇಶ ಪ್ರವಾಸಕ್ಕೆ ತೆರಳುತ್ತಿರುವುದರಿಂದ ಮೇ ತಿಂಗಳ ಕೊನೆ ವಾರದಲ್ಲಿ ಮಾವು ಮೇಳಕ್ಕೆ ಚಾಲನೆ ಸಿಗುವ ನಿರೀೆ ಇದೆ.
ಕಳೆದ ವಾರ ಬೆಂಗಳೂರಿನ ಲಾಲ್ಬಾಗ್ನಲ್ಲಿ ಮಾವು ಬೆಳೆಗಾರರ ಸಂದ ಮುಖಂಡರೊಂದಿಗೆ ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆನ್ಲೈನ್ ಮೂಲಕ ಮಾವು ಮಾರಾಟ ನಿರ್ಧಾರ ಕೈಗೊಳ್ಳಲಾಗಿತ್ತು.
ಗುರುವಾರ ಮಾವು ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ತೋಟಗಾರಿಕೆ ಇಲಾಖೆ ನಿರ್ದೇಶಕ ನಾಗೇಂದ್ರ ಪ್ರಸಾದ್ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾವು ಮೇಳದ ಉದ್ಘಾಟನೆಗೆ ಆಹ್ವಾನ ನೀಡಿದಾಗ, ವಿದೇಶ ಪ್ರವಾಸ ಮುಗಿದ ಬಳಿಕ ದಿನಾಂಕ ನಿಗದಿಪಡಿಸುವಂತೆ ಸೂಚಿಸಿರುವುದರಿಂದ ಮೇ ತಿಂಗಳ ಕಡೆ ವಾರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ ಸುಮಾರು 1.60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, ಇದರಲ್ಲಿ ಕೋಲಾರ ಜಿಲ್ಲೆಯಲ್ಲೇ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಯ ಮಾವು ಉತ್ಪಾದಿಸಲಾಗುತ್ತಿದೆ. ಕರೊನಾದಿಂದ 2 ವರ್ಷ ವ್ಯಾಪಾರ ವಹಿವಾಟು ಇಲ್ಲದೆ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದರು. ಜತೆಗೆ ಹವಾಮಾನ ವೈಪರಿತ್ಯದಿಂದಾಗಿ ಮಾವು ನೆಲಕಚ್ಚಿರುವುದರಿಂದ ಬೆಳೆಗಾರರು ದಿಕ್ಕು ತೋಚದೆ ತಲೆ ಮೇಲೆ ತಣ್ಣಿರು ಬಟ್ಟೆ ಹಾಕಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ಮಾವು ಮಂಡಳಿ ಆನ್ಲೈನ್ ಮೂಲಕ ಮಾವು ಮಾರಾಟಕ್ಕೆ ನಿರ್ಧರಿಸಿರುವುದು ರೈತರಿಗೆ ಒಂದಿಷ್ಟು ಅನುಕೂಲವಾಗುವುದರಲ್ಲಿ ಸಂಶಯವಿಲ್ಲ.
ಲಾಲ್ಬಾಗ್ನಲ್ಲಿ ಮಾವು ಮೇಳಕ್ಕಾಗಿ 100 ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ, ರೈತರು ಆನ್ಲೈನ್ ಮೂಲಕ ಮಾವು ಮಾರಾಟ ಮಾಡುವುದರಿಂದ ಮಾರುಕಟ್ಟೆ ಸಮಸ್ಯೆ ನಿವಾರಣೆಯಾಗಲಿದೆ. ಆನ್ಲೈನ್ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಲು ರೈತರಿಗೆ ಪ್ರತ್ಯೇಕ ಪೋರ್ಟಲ್ ಬಳಕೆಯ ಜತೆಗೆ 4 ಮಂದಿ ತಾಂತ್ರಿಕ ಸಿಬ್ಬಂದಿಯನ್ನು ಒದಗಿಸಲಾಗುತ್ತಿದೆ.
ಮೇಳವನ್ನು 15 ದಿನಕ್ಕೆ ಬದಲು ಒಂದು ತಿಂಗಳು ನಡೆಸಲು ತೀರ್ಮಾನಿಸಲಾಗಿದೆ. ಆದರೆ ಆನ್ಲೈನ್ ಮೂಲಕ ಮಾವು ಮಾರಾಟ ಮಾಡುವ ರೈತರಿಂದ ಶೇ.2 ನಿರ್ವಹಣಾ ವೆಚ್ಚ (ಹ್ಯಾಂಡ್ಲಿಂಗ್ ಚಾರ್ಜ್) ಪಡೆಯಲು ತೀರ್ಮಾನಿಸಿರುವುದಕ್ಕೆ ರೈತರಲ್ಲಿ ವಿರೋಧ ವ್ಯಕ್ತವಾಗಿದೆ.
ರಾಜ್ಯ ಸರ್ಕಾರ ಮಾವು ಮಂಡಳಿಗೆ ಪ್ರತಿವರ್ಷ ಅನುದಾನ ನೀಡುತ್ತಿದ್ದು, ಆನ್ಲೈನ್ ವ್ಯವಸ್ಥೆ, ಮಳಿಗೆ ನಿರ್ಮಾಣ, ಸಿಬ್ಬಂದಿ ನೇಮಕ, ಅಂಚೆ ವೆಚ್ಚ, ನೀರು, ವಿದ್ಯುತ್ ಸೇರಿ ಇತರ ರ್ಖಚನ್ನು ಈ ಹಣದಲ್ಲಿ ಬಳಕೆ ಮಾಡುವ ಬದಲು ರೈತರಿಂದ ಹ್ಯಾಂಡ್ಲಿಂಗ್ ಚಾರ್ಜ್ ವಸೂಲಿ ಮಾಡಿದಲ್ಲಿ ರೈತನಿಗೆ ಲಾಭಕ್ಕಿಂತ ಹೊರೆಯಾಗುತ್ತದೆ ಎಂಬುದು ಮಾವು ಬೆಳೆಗಾರರ ಅಳಲು.
ವಿಧಿ ಇಲ್ಲದೆ ಒಪ್ಪಿಗೆ: ಸಭೆಯಲ್ಲಿ ಭಾಗವಹಿಸಿದ್ದ ಕೋಲಾರ ಜಿಲ್ಲಾ ಮಾವು ಉತ್ಪಾದಕರ ಸಂದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ರೈತರಿಂದ ಕಮಿಷನ್ ಪಡೆಯುವುದು ಸೂಕ್ತವಲ್ಲ, ಮಂಡಳಿಗೆ ನಷ್ಟವಾಗಬಾರದು ಎಂದು ರೈತರಿಗೆ ಹೊರೆಯನ್ನುಂಟು ಮಾಡುವುದು ಯಾವ ನ್ಯಾಯ, ಮಂಡಳಿ ನಡೆಸಲು ಆಗದಿದ್ದರೆ ರದ್ದು ಮಾಡಿ, ಸರ್ಕಾರದ ಮೇಲೆ ಒತ್ತಡ ತಂದು ಮಾವು ಮೇಳಕ್ಕೆ ವಿಶೇಷ ಅನುದಾನ ತರಲು ತಮ್ಮಿಂದ ಆಗದಿದ್ದರೆ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಎಂದು ರ್ಜಿಸಿದ್ದರು. ಚಿನ್ನಪ್ಪರೆಡ್ಡಿ ಅವರ ಆಕ್ರೋಶ ಅರಿತ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ಎಪಿಎಂಸಿಯಲ್ಲಿ ಶೇ.10 ಕಮಿಷನ್ ಹಿಡಿಯಲಾಗುತ್ತದೆ, ಆ ಕೆಲಸ ನಾವು ಮಾಡುತ್ತಿಲ್ಲ, ರೈತರಿಂದ ಕಮಿಷನ್ ವಸೂಲಿ ಮಾಡುವುದಿಲ್ಲ. ಹ್ಯಾಂಡ್ಲಿಂಗ್ ಚಾರ್ಜ್ ಎಂದು ಶೇ. 5 ಹಣ ಹಿಡಿಯಲು ಉದ್ದೇಶಿಸಲಾಗಿತ್ತು, ರೈತರಿಗೆ ಹೊರೆ ಆಗದಿರಲಿ ಎಂದು ಶೇ.2 ಹಣ ಪಡೆಯಲು ನಿರ್ಧರಿಸಲಾಗಿದೆ. ರೈತರಿಂದ ಪಡೆಯುವ ಶೇ. 2 ಹಣದಲ್ಲಿ ಸಿಬ್ಬಂದಿಗೆ ವೇತನ, ಇತರ ಸವಲತ್ತು ಜತೆಗೆ ಗ್ರಾಹಕರಿಗೆ ಅಂಚೆ ಮೂಲಕ ಮಾವು ಸರಬರಾಜು ಮಾಡಲು ಆಗುವ ವೆಚ್ಚವನ್ನು ಭರಿಸಲಾಗುತ್ತದೆ. ಒಂದು ರೂ. ಸಹ ನಾನಾಗಲಿ, ತೋಟಗಾರಿಕೆ ಇಲಾಖೆ ನಿರ್ದೇಶಕಾಗಲಿ ಸ್ವಂತಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟ ನಂತರ ವಿಧಿ ಇಲ್ಲದೆ ಶೇ.2 ಹಣ ಪಡೆಯಲು ಒಪ್ಪಿದ್ದಾಗಿ ಚಿನ್ನಪ್ಪರೆಡ್ಡಿ ತಿಳಿಸಿದ್ದಾರೆ.
ಮಾವು ಮೇಳ ನಡೆಸಲು 10 ಲಕ್ಷ ರೂ. ಬೇಕು. ಮಂಡಳಿಯಲ್ಲಿ ಹಣದ ಕೊರತೆ ಇರುವುದರಿಂದ ಮಾವು ಬೆಳೆಗಾರರ ಸಂದ ಮುಖಂಡರ ಒಪ್ಪಿಗೆ ಪಡೆದು ಶೇ.2 ಹ್ಯಾಂಡ್ಲಿಂಗ್ ಚಾರ್ಜ್ ಹಿಡಿದು ರೈತರಿಗೆ ಸಲ್ಲಬೇಕಾದ ಹಣವನ್ನು ಅವರವರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಸಿಎಂ ವಿದೇಶ ಪ್ರವಾಸ ಮುಗಿಸಿದ ಮೇಲೆ ಮೇಳಕ್ಕೆ ಚಾಲನೆ ನೀಡಲಾಗುತ್ತದೆ. ಕೆ.ವಿ.ನಾಗರಾಜ್, ಅಧ್ಯಕ್ಷರು, ಮಾವು ಮಂಡಳಿ ಮಾವಿಗೆ ಶೇ. 2 ಹ್ಯಾಂಡ್ಲಿಂಗ್ ಚಾರ್ಜ್ ಹೆಸರಲ್ಲಿ ಪಡೆಯುವುದರಿಂದ ಸಣ್ಣ ರೈತರಿಗೆ ಹೊರೆಯಾಗುತ್ತದೆ. ಇದು ಕಮಿಷನ್ ಅಲ್ಲದೆ ಬೇರೇನು?, ಅಧ್ಯಕ್ಷರು ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ತರಲು ಆಗದಿದ್ದ ಮೇಲೆ ರಾಜೀನಾಮೆ ನೀಡುವುದು ಒಳ್ಳೆಯದು. ಸರ್ಕಾರ ನೂರಾರು ನಿಗಮ ಮಂಡಳಿಗಳನ್ನು ರಚಿಸಿ ಕೋಟ್ಯಂತರ ರೂ. ಅನುದಾನ ನೀಡಿದೆ, ಮಾವು ಮಂಡಳಿಗೆ ಅನುದಾನ ನೀಡಲು ಆಗದಿದ್ದ ಮೇಲೆ ಮಂಡಳಿಯನ್ನು ರದ್ದು ಮಾಡಲಿ, ವಿಧಿ ಇಲ್ಲದೆ ಶೇ. 2 ಹ್ಯಾಂಡ್ಲಿಂಗ್ ಚಾರ್ಜ್ಗೆ ಒಪ್ಪಿದ್ದೇವೆ. ಮಾವು ಮೇಳಕ್ಕೆ ಸಹಕಾರ ನೀಡುತ್ತೇವೆ. ನೀಲಟೂರು ಚಿನ್ನಪ್ಪರೆಡ್ಡಿ, ಜಿಲ್ಲಾ ಮಾವು ಬೆಳೆಗಾರರ ಸಂ, ಕೋಲಾರ