ಜಿಲ್ಲೆ

ಮಾಲೀಕನ ಮನೆಯಲ್ಲೇ ನಗದು ಕಳವು

ಯಳಂದೂರು: ವ್ಯಕ್ತಿಯೊಬ್ಬ ತಾನು ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕನ ಮನೆಯಲ್ಲಿ ಇತ್ತೀಚೆಗೆ ನಗದು ಕಳವು ಮಾಡಿ ಪರಾರಿಯಾಗಿದ್ದಾನೆ.

ಪಟ್ಟಣದ ಕೆ.ಕೆ.ರಸ್ತೆಯಲ್ಲಿರುವ ಮನೆಯಲ್ಲಿ ನಗದು ಕಳ್ಳತನವಾಗಿದೆ. ಹಳೇ ಅಂಚೆ ಕಚೇರಿ ರಸ್ತೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ಟ್ರೇಡರ್ಸ್‌ನಲ್ಲಿ ಕೆಲಸಕ್ಕೆ ಇದ್ದ ಮಂಗಳರಾಮ್ ಹಾಗೂ ಈತನ ಸಹೋದರ ಜೀತು ಎಂಬುವವನ ವಿರುದ್ಧ ಮಾಲೀಕರಾದ ಎಂ.ಮಹೇಂದ್ರ ದೂರು ನೀಡಿದ್ದಾರೆ. ಅಂಗಡಿಯಲ್ಲಿ ಕೆಲಸಕ್ಕೆ ಇದ್ದ ಮಂಗಳರಾಮ್ ಎಂಬ ವ್ಯಕ್ತಿ ಮಹೇಂದ್ರ ಅವರ ಮನೆಯಲ್ಲಿದ್ದ 1.48 ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಈ ಕೃತ್ಯಕ್ಕೆ ಈತನ ಸಹೋದರ ಜೀತು ಸಹಕರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.