ಜಿಲ್ಲೆ

ಮಾರ್ಚ್​ನಲ್ಲಿ ‘1ರಾಬರಿ ಕಥೆ’ ತೆರೆಗೆ

Dharwad

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

‘ಸಮನ್ವಿ ಕ್ರಿಯೇಷನ್ಸ್ ಬೇಲೂರು’ ಚಿತ್ರ ನಿರ್ಮಾಣ ಸಂಸ್ಥೆಯ ಚೊಚ್ಚಲ ಚಿತ್ರ ‘1ರಾಬರಿ ಕಥೆ’ ಚಲನಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಮಾರ್ಚ್ ತಿಂಗಳಲ್ಲಿ ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಾಯಕ ನಟ ರಣಧೀರಗೌಡ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವ ಪಕ್ಕಾ ಮಾಸ್ ಕಮರ್ಷಿಯಲ್, ರೊಮ್ಯಾಂಟಿಕ್, ಕಾಮಿಡಿ, ಆಕ್ಷನ್, ಸಸ್ಪೆನ್ಸ್- ಥ್ರಿಲ್ಲರ್, ಸೆಂಟಿಮೆಂಟ್ ಕಥೆ ಒಳಗೊಂಡ ಚಿತ್ರ ಇದಾಗಿದೆ ಎಂದರು.

ಹೊಸ ಪ್ರತಿಭೆ ರಿಷ್ವಿ ಭಟ್ ನಾಯಕಿ ಪಾತ್ರದಲ್ಲಿದ್ದಾರೆ. ಸಹನಟರಾಗಿ ಸುಂದರರಾಜ್, ಕರಿಸುಬ್ಬು, ಕಡ್ಡಿಪುಡಿ ಚಂದ್ರು, ಶಿವರಾಜ ಕೆ. ಆರ್. ಪೇಟೆ, ತಬಲಾ ನಾಣಿ, ಸಂಪತ್ ಮೈತ್ರೇಯ, ಜಹಾಂಗೀರ, ಗಿರೀಶ ಶಿವಣ್ಣ, ಮೂಗ್ ಸುರೇಶ, ಎಂ.ಕೆ. ಮಠ, ನವೀನ ಪಡೀಲ್, ಸಂಜುಬಸಯ್ಯ ಇತರರು ಇದ್ದಾರೆ ಎಂದರು.

ನಿರ್ದೇಶಕ ಗೋಪಾಲ್ ಹಳ್ಳೇರ, ಸಹ ನಟ ಪ್ರಕಾಶ ಗೋಕಾಕ, ನಾಯಕಿ ರಿಷ್ವಿ ಭಟ್ ಸುದ್ದಿಗೋಷ್ಠಿಯಲ್ಲಿದ್ದರು.