ಬಾಳೆಹೊನ್ನೂರು ಸಮೀಪದ ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಸಿಕ್ಕಿದ ಭಕ್ತನ ಬೇಡಿಕೆಯ ಚೀಟಿ. 
ಜಿಲ್ಲೆ

ಮಾರ್ಕಾಂಡೇಶ್ವರ ಸ್ವಾಮಿಗೆ 2 ಕೋಟಿ ರೂ. ಬೇಡಿಕೆ !

ಬಾಳೆಹೊನ್ನೂರು: ಮಹಾಶಿವರಾತ್ರಿ ಆಚರಣೆ ವೇಳೆ ಭಕ್ತನೊಬ್ಬ ಶಿವನಲ್ಲಿ 2 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟು ಹುಂಡಿಗೆ ಚೀಟಿ ಹಾಕಿರುವುದು ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ತಾಲೂಕಿನ ಪುರಾಣ ಪ್ರಸಿದ್ಧ ಖಾಂಡ್ಯ ಮಾರ್ಕಾಂಡೇಶ್ವರ ಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿಗೆ ಭಕ್ತನೋರ್ವ 2 ಕೋಟಿ ಹಣ ಕರುಣಿಸುವಂತೆ ಕೋರಿ ಚೀಟಿ ಹಾಕಿದ್ದಾನೆ.

ಶಿವರಾತ್ರಿ ನಂತರ ಗುರುವಾರ ಕಾಣಿಕೆ ಎಣಿಸುವ ವೇಳೆಯಲ್ಲಿ ಹುಂಡಿಯಲ್ಲಿ ಭಕ್ತನ ಬೇಡಿಕೆಯ ಚೀಟಿ ಕಂಡುಬಂದಿದ್ದು, ಓಂ ಶ್ರೀಮ್ ಶ್ರೀಯೇ ನಮಃ, ಶಿವಾ ನನಗೆ ಎರಡು ಕೋಟಿ ಹಣ ಬೇಕು ಎಂದು ಬರೆದು ಹಾಕಿದ್ದಾನೆ.