ಚಿತ್ರದುರ್ಗ:ಚಳ್ಳಕೆರೆ ತಾಲೂಕು ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನು ಮಾರಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ರುವ ಘಟನೆ ನಡೆದಿದೆ. ನಾಗಪ್ಪನಹಳ್ಳಿ ಗೇಟ್ ಮತ್ತು ಆಂಧ್ರಪ್ರದೇಶದ ಕುಂದುರ್ಪಿ ಮಂಡಲಕ್ಕೆ ಹೋಗುವ ಬಸ್‌ನಿಲ್ದಾಣ,ಮಹದೇವಪುರದ ಜ ಮೀನೊಂದರ ಬಳಿ ಅನಂತಪುರ ಜಿಲ್ಲೆ ಕಲ್ಯಾಣದುರ್ಗ ತಾಲೂಕು ಕುಂದುರ್ಪಿ ಮಂಡಲಕ್ಕೆ ಸೇರಿದ ಗ್ರಾಮವೊಂದರ ನಿವಾಸಿ ಎನ್.ಗಿತ್ತರಾಜ(28)ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ 8ರ ನಡುವೆ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ.
ಕೊಲೆಯಾದವನ ತಮ್ಮ ನಾಗರಾಜ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸ್ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿ ಸಿದ್ದಾರೆ.ಬೆಂಗಳೂರಲ್ಲಿ ಕೆಲಸ ಮಾಡಿಕೊಂಡಿದ್ದ ಗಿತ್ತರಾಜನ ಕೊಲೆ ಯಾವ ಕಾರಣಕ್ಕೆ ಆಗಿದೆ ಎಂಬುದು ತನಿಖೆಯಿಂದ ಗೊತ್ತಾಗ ಬೇಕಿದೆ.