ಜಿಲ್ಲೆ

ಮಾರನಾಳದಲ್ಲಿ ಪ್ರವಚನಕ್ಕೆ ಷರತ್ತುಬದ್ಧ ಅನುಮತಿ

ಕೊಡೇಕಲ್ : ವಿರಕ್ತಮಠದ ಶ್ರೀ ರಾಚೇಶ್ವರ ಮಹಾಶಿವಯೋಗಿಗಳ ೫೫೫ನೇ ಪುಣ್ಯಸ್ಮರಣೆ ನಿಮಿತ್ತ ಕೊಡೇಕಲ್, ಮಾರನಾಳ, ಬೂದಿಹಾಳ, ಹಗರಟಗಿ, ರಾನಜಕೋಳುರ, ಎಣ್ಣಿ ವಡಗೇರಾ ಗ್ರಾಮಗಳಲ್ಲಿ ಸಂಚಾರಿ ಶಿವಾನುಭವ ಆಧ್ಯಾತ್ಮಿಕ ಪ್ರವಚನ ನಡೆಸಲು ಗುರುವಾರ ತಡರಾತ್ರಿ ಸಹಾಯಕ ಆಯುಕ್ತರು ಷರತ್ತುಬದ್ಧ ಅನುಮತಿ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಶ್ರೀ ನೀಲಕಂಠ ಸ್ವಾಮೀಜಿ ಆಯೋಜಿಸಿದ್ದ ಶಿವಾನುಭವ ಪ್ರವಚನ ರದ್ದುಗೊಳಿಸುವಂತೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ದೂರು ನೀಡಿದ್ದರಿಂದ ಉz್ದೆÃಶಿತ ಗ್ರಾಮಗಳಲ್ಲಿ ಅನುಮತಿ ನೀಡದೆ ಸಹಾಯಕ ಆಯುಕ್ತರು ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಇದನ್ನು ವಿರೋಧಿಸಿ ಗುರುವಾರ ತಡರಾತ್ರಿವರೆಗೆ ಸ್ವಾಮೀಜಿ ಮತ್ತು ಭಕ್ತರು ಹುಣಸಗಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪರಿಸ್ಥಿತಿಯ ಸೂಕ್ಷö್ಮತೆ ಅರಿತ ಎಸಿ ಡಾ.ಹಂಪಣ್ಣ ಸಜ್ಜನ್ ನಿಷೇಧಾಜ್ಞೆ ಮಾರ್ಪಡಿಸಿ ಷರತ್ತುಬದ್ಧ ಅನುಮತಿ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದು, ಪ್ರತಿಭಟನಾಕಾರರಿಗೆ ಅನುಮತಿ ಪತ್ರದ ಪ್ರತಿಯನ್ನು ಕಂದಾಯ ಸಿಬ್ಬಂದಿ ನೀಡಿದರು. ಹೀಗಾಗಿ ಉz್ದÉÃಶಿತ ಎಲ್ಲ ಗ್ರಾಮಗಳಲ್ಲಿ ಪ್ರವಚನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಾರನಾಳದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.