ಜಿಲ್ಲೆ

ಮಾರನಬಸರಿಯಲ್ಲಿ 3 ಸಾವಿರ ಮಾಸ್ಕ್ ವಿತರಣೆ

ನರೇಗಲ್ಲ: ಸಮೀಪದ ಮಾರನಬಸರಿ ಗ್ರಾಮದಲ್ಲಿ ಸೋಮವಾರ ಮನೆ ಮನೆಗೆ ತೆರಳಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ ಸಿಬ್ಬಂದಿ 3 ಸಾವಿರಕ್ಕೂ ಅಧಿಕ ಉಚಿತ ಮಾಸ್ಕ್​ಗಳನ್ನು ವಿತರಿಸಿದರು.

ಪಿಡಿಒ ಎಸ್.ಆರ್. ಸಂಕನೂರ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಹೆಚ್ಚಾಗಿ ಕೃಷಿ ಕೂಲಿ ಕಾರ್ವಿುಕರಾಗಿ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಹೆಚ್ಚಿನ ದುಡ್ಡು ಕೊಟ್ಟು ಮಾಸ್ಕ್​ಗಳನ್ನು ಖರೀದಿಸುವುದು ತೊಂದರೆಯಾಗುತ್ತದೆ. ಹೀಗಾಗಿ ಗ್ರಾಮದ ಪ್ರತಿಯೊಬ್ಬ ನಾಗರಿಕರಿಗೆ ಆಶಾ, ಅಂಗನವಾಡಿ, ಆರೋಗ್ಯ ಇಲಾಖೆ ಹಾಗೂ ಗ್ರಾ.ಪಂ ಸಿಬ್ಬಂದಿ ಮೂಲಕ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ’ ಎಂದರು.

ಗ್ರಾಪಂ ಅಧ್ಯಕ್ಷೆ ಸಾವಕ್ಕ ಮಾದರ, ಉಪಾಧ್ಯಕ್ಷೆ ನೂರ್​ಜಾನ ವಾರಿಕಲ್ಲ, ಶರಣಪ್ಪ ಸಂಗಟಿ, ವೀರಪ್ಪ ಮರಡಿ, ಬೂದೇಶ ವಣಗೇರಿ, ಮಹಬೂಬ್​ಸಾಬ್ ಮೊತೆಖಾನ, ಶಾಂತವ್ವ ಜಿಗಳೂರ, ಲಕ್ಷ್ಮವ್ವ ಗೊತ್ತರು, ನೇತ್ರಾವತಿ ಹೂಗಾರ, ಶಿವನಗೌಡ ಪಾಟೀಲ, ನೀಲಮ್ಮಲಾದೇವಿ ಬಿಂಗಿ, ಶಿವನಾಂದ ಗಂಗಪ್ಪಣ್ಣವರ, ಚನ್ನಪ್ಪ ಹೂಗಾರ, ಮಂಗಲಾ ವೈದ್ಯೆ, ಸುಮಂಗಲಾ ಒಣಗೇರಿ, ಫರೀದಾ ಜಾಲಿಹಾಳ, ಬಸಮ್ಮ ಅಂಗಡಿ, ಪದ್ಮಾ ಅಬ್ಬಿಗೇರಿ, ರತ್ನಾ ತಳವಾರ, ವಿಜಯಲಕ್ಷ್ಮೀ ದಢೇಸೂರಮಠ, ಲಕ್ಷ್ಮೀಬಾಯಿ ಹಿರೇಮಠ ಇತರರಿದ್ದರು.