ಮಾರಕಾಸ್ತ್ರ ಹೊಂದಿದ್ದ ವ್ಯಕ್ತಿಯ ಬಂಧನ
ಬೆಳಗಾವಿ: ಅಕ್ರಮವಾಗಿ ಮಾರಕಾಸ್ತ್ರ ಹೊಂದಿದೆ ವ್ಯಕ್ತಿಯನ್ನು ನಗರದ ಕ್ಯಾಂಪ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಇಲ್ಲಿನ ತೆಂಗಿನಕೇರ ಗಲ್ಲಿ ನಿವಾಸಿ ಆಸೀಫ ಮಹಮ್ಮದ್ ಗೌಸ ತಹಶಿಲ್ದಾರ(41) ಬಂಧಿತ ಆರೋಪಿ.ಈತ ನಗರದ ಕಾಂಟೋಮೇಂಟ್ ಚಾಳದ ಬಳಿ ತನ್ನ ಚೀಲದಲ್ಲಿ ತಲವಾರ ಇಟ್ಟುಕೊಂಡು ಓಡಾಡುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.