ಜಿಲ್ಲೆ

ಮಾರಕಾಸ ಹಿಡಿದು ಕಳ್ಳತನಕ್ಕೆ ಯತ್ನ

ತಿಪಟೂರು: ನಗರದ ವಿವಿಧ ಬಡಾವಣೆಗಳಲ್ಲಿ ಕಳ್ಳರ ಗುಂಪೊಂದು ಮುಸುಕುಧಾರಿಗಳಾಗಿ, ಕೈಯಲ್ಲಿ ಮಾರಕಾಸಗಳನ್ನು ಹಿಡಿದು ಕಳ್ಳತನಕ್ಕೆ ಯತ್ನಿಸಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಶನಿವಾರ ಸೆರೆಯಾಗಿದೆ. ಜೂನ್​ 21 ರಂದು ತುಮಕೂರಿನಲ್ಲಿ ಸಹಕಾರಿ ಸಚಿವ ಕೆ.ಎನ್​.ರಾಜಣ್ಣ ಅವರ ಅಮೃತ ಮಹೋತ್ಸವ ಕಾರ್ಯಕ್ರಮದ ಬಂದೋಬಸ್ತಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ತೆರಳಿರುವುದನ್ನು ಗಮನಿಸಿದ ಕಳ್ಳರು, ನಗರದ ಸಿದ್ದರಾಮೇಶ್ವರ ಬಡಾವಣೆ. ಶಾರದಾನಗರ, ಸೇರಿ ಹಲವು ಬಡಾವಣೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಆಗಂತುಕರ ಚಲನ, ವಲನಗಳು ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸ್​ ಇಲಾಖೆಯ ಗಮನಕ್ಕೆ ತರಬೇಕು. ಕಳ್ಳರನ್ನು ಸೆರೆಹಿಡಿಯಲು ಅಗತ್ಯ ಕ್ರಮ ವಹಿಸಲಾಗಿದ್ದು. ನಗರದೆಲ್ಲೆಡೆ ಪೊಲೀಸ್​ ಗಸ್ತು ಹೆಚ್ಚಿಸಲಾಗಿದೆ ಡಿವೈಎಸ್​ಪಿ ವಿನಾಯಕ ಎನ್​ ಶಟಗೇರಿ ತಿಳಿಸಿದ್ದಾರೆ.