ಜಿಲ್ಲೆ

ಮಾರಕ ಕಾಯಿಲೆಗೆ ತುತ್ತಾಗದಿರಲಿ

ಮಾಂಜರಿ: ಆರೋಗ್ಯ ದೃಷ್ಟಿಯಿಂದ ತಂಬಾಕು ಸೇವನೆ ತ್ಯಜಿಸುವುದರಿಂದ ಕ್ಯಾನ್ಸರ್‌ನಂತಹ ಮಾರಕ ಖಾಯಿಲೆಯಿಂದ ದೂರವಿರಬಹುದು ಎಂದು ಗೊಮ್ಮಟೇಶ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎನ್.ಎ.ಮಗದುಮ್ ಹೇಳಿದರು.

ಸಮೀಪದ ಅಂಕಲಿ ಗ್ರಾಮದ ಡಾ.ಎನ್.ಎ.ಮಗದುಮ್ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನ ಕೇಂದ್ರದ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆಯಲ್ಲಿ ಅವರು ಮಾತನಾಡಿ, ತಂಬಾಕು ಸೇವನೆಯಿಂದ ದೂರ ಉಳಿಯಲು ವೈದ್ಯರ ಸಲಹೆ ಪಾಲಿಸಬೇಕು ಎಂದರು.

ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ತಂಬಾಕು ನಿಷೇಧ ರ‍್ಯಾಲಿ ಜರುಗಿತು.

ಪ್ರಾಚಾರ್ಯ ಪ್ರಸನ್ನ ಸವನೂರು, ಉಪ ಪ್ರಾಚಾರ್ಯ ರಾಮಗೌಡ ಪಾಟೀಲ, ವೈದ್ಯರಾದ ದತ್ತಾ ಪಾಟೀಲ, ರುಬಿಯಾ ಫಿರ್ಜಾದೆ, ಸವಿತಾ ಜಾಧವ, ಮನೋಜ ಬಾಹುಬಲಿ, ಸ್ವಾತಿ ಸರ್ವದೆ, ಡಾ.ಶ್ರೀದೇವಿ, ಡಾ.ಸವಿತಾ ಜಾಧವ, ಬಾಹುಬಲಿ ಜನಾಜ, ಶಿವರಾಜ ಮಗದುಮ್, ಸತೀಶ ಜಾಧವ ಇತರರು ಇದ್ದರು.