ಜಿಲ್ಲೆ

ಮಾಪಣ್ಣ ಹದನೂರ ಶ್ರದ್ಧಾಂಜಲಿ ಡಿ.2ರಂದು

ಕಲಬುರಗಿ: ಮಾದಿಗರಿಗೆ ಮೀಸಲಾತಿಯಲ್ಲಿ ಅನ್ಯಾಯವಾಗಿದ್ದು, ಒಳ ಮೀಸಲು ನೀಡಬೇಕು ಎಂದು ಆಗ್ರಹಿಸಿ ಮೂರು ದಶಕದ ಹಿಂದೆ ರಾಜ್ಯದಲ್ಲಿ ಮಾದಿಗ ದಂಡೋರಾ ಸಂಘಟನೆ ಸ್ಥಾಪಿಸಿ, ಸಮಾಜದ ಅಭಿವೃದ್ಧಿಗೆ ಕೊನೆವರೆಗೂ ಹೋರಾಡಿ ನಿಧನರಾದ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮಾಪ್ಪಣ್ಣ ಹದನೂರ ಅವರ ಶ್ರದ್ಧಾಂಜಲಿ ಸಭೆ ಜ.೨ರಂದು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಉಪಾಧ್ಯಕ್ಷ ಬಸವರಾಜ ಮೇತ್ರಿ ತಿಳಿಸಿದರು. ನಗರದ ಕನ್ನಡ ಭವನದಲ್ಲಿ ಮಧ್ಯಾಹ್ನ ೧ಗಂಟೆಗೆ ಕನ್ನಡ ಭವನದಲ್ಲಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಂಡಿದ್ದು, ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಯ ಸಮಾಜದ ಎಲ್ಲ ಹಿರಿಯರು ಪಾಲ್ಗೊಳ್ಳಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಂದಿನ ದಿನಗಳಲ್ಲಿ ಸಮಾಜದ ಸಂಘಟನೆ ಬಲವರ್ಧನೆಗೆ, ಮಾಪಣ್ಣ ಹದನೂರ ಅವರ ಹೋರಾಟದ ಹಾದಿಯನ್ನು ತಿಳಿಸಿ, ಸ್ಫೂರ್ತಿ ಪಡೆಯಲು ಬೆಂಗಳೂರಿನಲ್ಲಿ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಗುವುದು. ರಾಜ್ಯಮಟ್ಟದ ನಾಯಕು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಚಂದ್ರಕಾಂತ ಸಗರಕರ್, ಮಲ್ಲಿಕಾರ್ಜುನ ಕುರಕುಂದಿ, ಶಿವರಾಜ ಜಿನಕೇರಿ, ರುದ್ರಪ್ಪ ಭಾಸಗಿ, ಮಲ್ಲೇಶಿ ಸೈದಾಪುರ ಇತರರಿದ್ದರು.