ಕಲಬುರಗಿ: ಶಾಲೆ, ಕಾಲೇಜುಗಳ ಮಕ್ಕಳಲ್ಲಿ ಮಾನಸಿಕ ಅನಾರೋಗ್ಯ ಸಮಸ್ಯೆ ಹೆಚ್ಚುತ್ತಿದ್ದು, ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿಡಲು ಮಕ್ಕಳಿಗೆ ಉಸಿರಾಟದ ವ್ಯಾಯಾಮ ಕಡ್ಡಾಯಗೊಳಿಸಬೇಕು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷ ಡಾ.ಕಿರಣ ದೇಶಮುಖ ಆಗ್ರಹಿಸಿದರು.
೧೩ರಿಂದ ೧೯ ವರ್ಷದೊಳಗಿನ ಯುವಕರಲ್ಲಿ ಆರೋಗ್ಯ, ಮಾನಸಿಕ ಸಮಸ್ಯೆ ಹೆಚ್ಚುತ್ತಿವೆ. ಶಾಲಾ ಹಂತದಿAದಲೇ ಒತ್ತಡ ನಿರ್ವಹಣೆ ಉಸಿರಾಟದ ವ್ಯಾಯಾಮ, ಯೋಗ ಪರಿಪೂರ್ಣವಾಗಿ ಸರ್ಕಾರ ಜಾರಿ ಮಾಡಬೇಕು. ಈ ಕುರಿತು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಐಎಂಎ ಆಡಳಿತ ಮಂಡಳಿ ಸದಸ್ಯ ಡಾ.ಸೊಹೇಲ್ ಶಾಲಿ ಮಾತನಾಡಿ, ವಿಶ್ವ ಮಾನಸಿಕ ಆರೋಗ್ಯ ದಿನದ ನಿಮಿತ್ತ ಈ ಬಾರಿ `ಕೆಲಸದ ಸ್ಥಳದ¯್ಲೆÃ ಮಾನಸಿಕ ಆರೋಗ್ಯ' ಘೋಷವಾಕ್ಯವಾಗಿದೆ. ಈ ನಿಟ್ಟಿನಲ್ಲಿ ಐಎಂಎ ವತಿಯಿಂದ ೧೩ ರಿಂದ ೧೯ ವರ್ಷದೊಳಗಿನ ವಯಸ್ಕ ಯುವಜನರಲ್ಲಿ ಮಾನಸಿಕ ಖಿನ್ನತ, ಒತ್ತಡ, ಮಾನಸಿಕ ಕ್ಷೋಭೆ ಹೆಚ್ಚುತ್ತಿರುವ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮನೋಚೈತನ್ಯ ಕಾರ್ಯಕ್ರಮದಡಿ ಮಾನಸಿಕ ಆರೋಗ್ಯದ ಶಿಬಿರಕ್ಕೆ ಕೈಜೋಡಿಸಿz್ದÉÃವೆ.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಜಿ¯್ಲÁಧ್ಯP್ಷÀ ಡಾ.ಗುರುಲಿಂಗಪ್ಪ ಪಾಟೀಲï, ಮನೋವೈದ್ಯೆ ಡಾ.ಪ್ರಬುಲ್ಲಾ ಗುಬ್ಬಿ ಇತರರಿದ್ದರು.