ಜಿಲ್ಲೆ

ಮಾನಸಿಕ ಆರೋಗ್ಯ ಜಾಗೃತಿಗಾಗಿ ಬೈಕ್ ಪ್ರವಾಸ

ಚಿತ್ರದುರ್ಗ: ಮಾನಸಿಕ ಆರೋಗ್ಯ ಜಾಗೃತಿಗಾಗಿ ಬೆಂಗಳೂರಿಂದ ಶಿರಡಿವರೆಗೆ ಹಮ್ಮಿಕೊಂಡಿರುವ ಪೀಣ್ಯ ರೋಟರಿ ಸಂಸ್ಥೆ 8ಪದಾಧಿಕಾರಿಗಳಿರುವ ಬೈಕ್ ಪ್ರವಾಸಿ ತಂಡವನ್ನು ಸೋಮವಾರ ಬೆಳಗ್ಗೆ ನಗರದ ಒನಕೆ ಓಬವ್ವ ವೃತ್ತದಲ್ಲಿ ಸಂಸ್ಥೆ ಸ್ಥಳೀಯ ಪದಾಧಿಕಾರಿಗಳು ಸ್ವಾಗತಿಸಿ,ಬೀಳ್ಕೊಟ್ಟ ರು.
ಈ ಸಂದರ್ಭದಲ್ಲಿ ಮಾತನಾಡಿದ ತಂಡದ ಮುಖ್ಯಸ್ಥ ರಾಜೇಶ್,ಎಲ್ಲ ವಯಸ್ಸಿನವರಿಗೂ ಮಾನಸಿಕ ಆರೋಗ್ಯದ ಅಗತ್ಯವಿದೆ. ಸೋ ಮವಾರ ಆರಂಭವಾಗಿರುವ ಪ್ರವಾಸ ಸೆ.30ಕ್ಕೆ ಅಂತ್ಯವಾಗಲಿದೆ ಎಂದರು. ಮಾರ್ಗ ಮಧ್ಯೆ ಆಯ್ದ ಸ್ಥಳಗಳಲ್ಲಿ ದಿನವೊಂದಕ್ಕೆ ನಾಲ್ಕು ಕಡೆ ಗಳಲ್ಲಿ ಸಭೆಗಳನ್ನು ಏರ್ಪಡಿಸುವ ಮೂಲಕ ಮಾನಸಿಕ ಆರೋಗ್ಯದ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿ ಹೇಳಿದರು.
ಸಂಸ್ಥೆ ಪದಾಧಿಕಾರಿಗಳಾದ ವಿನೋದ್‌ಆಗ್ರವಾಲ್,ನವೀನ್,ಶ್ರೀಕಾಂತ್,ಶ್ರೀನಿವಾಸ್,ರಾಜು,ಜಯಪ್ರಕಾಶ್,ಇಕ್ರಾಂಮಹಮದ್ ಖಾನ್,ಮೋಹನ್,ಸ್ಥಳೀಯರಾದ ಕನಕರಾಜು,ಎಸ್.ವೀರೇಶ್,ಗಿರೀಶ್,ವೀರಭದ್ರಸ್ವಾಮಿ,ಕುರುಬರಹಳ್ಳಿ ಶಿವಣ್ಣ,ಸೂರ‌್ಯನಾರಾಯ ಣ,ಶಶಿಧರ್,ಮೋಹನ್,ಬಿ.ಎಸ್.ಶಂಕ್ರರಪ್ಪ,ವೀರಣ್ಣ ಮತ್ತಿತರರು ಇದ್ದರು.
(ಸಿಟಿಡಿ 19 ರೋಟರಿ)
ಮಾನಸಿಕ ಆರೋಗ್ಯ ಜಾಗೃತಿಗಾಗಿ ಬೆಂಗಳೂರು ಪೀಣ್ಯ ರೋಟರಿ ಪದಾಧಿಕಾರಿಗಳ ಬೈಕ್ ಪ್ರವಾಸಿ ತಂಡವನ್ನು ಚಿತ್ರದುರ್ಗದಲ್ಲಿ ಸೋಮವಾರ ರೋಟರಿ ಸಂಸ್ಥೆ ಸ್ಥಳೀಯ ಪ್ರಮುಖರು ಸ್ವಾಗತಿಸಿದರು. ರಾಜೇಶ್,ವಿನೋದ್‌ಆಗ್ರವಾಲ್,ನವೀನ್,ಶ್ರೀಕಾಂತ್,ಶ್ರೀನಿ ವಾಸ್,ರಾಜು,ಜಯಪ್ರ ಕಾಶ್,ಇಕ್ರಾಂಮಹಮದ್ ಖಾನ್,ಮೋಹನ್ ಹಾಗೂ ಕನಕರಾಜು,ಎಸ್.ವೀರೇಶ್,ವೀರಭದ್ರಸ್ವಾಮಿ, ಕುರುಬರಹಳ್ಳಿ ಶಿವಣ್ಣ,ಇತರರು ಇದ್ದರು.