ಜಿಲ್ಲೆ

ಮಾನಸಿಕ ಆರೋಗ್ಯ ಕುರಿತು ಬೀದಿ ನಾಟಕ

ಮೈಸೂರು: ವ್ಯಾಯಾಮದಿಂದ ದೈಹಿಕ, ಮಾನಸಿಕ ಆರೋಗ್ಯ ಎಂಬ ಧ್ಯೇಯದೊಂದಿಗೆ ಹೆಜ್ಜೆ ಹಾಕಿದ್ದಲ್ಲದೆ, ಬೀದಿ ನಾಟಕದ ಮೂಲಕ ಅರಿವು ಮೂಡಿಸುವ ಕೆಲಸವನ್ನು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮಾಡಿದರು.


ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ವಿದ್ಯಾವರ್ಧಕ ವಿದ್ಯಾರ್ಥಿಗಳು, ಪ್ರಾಧ್ಯಾಪಕರ ಜತೆಗೂಡಿ ಚಾಮುಂಡಿಬೆಟ್ಟದ ಮೆಟ್ಟಿಲು ಸಮೀಪದಲ್ಲಿ ನಾಟಕ ಪ್ರಸ್ತುತಪಡಿಸಿ, ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಿದರು.


ಪ್ರತಿ 8 ಜನರಲ್ಲಿ ಒಬ್ಬರಿಗೆ ಮಾನಸಿಕ ಆರೋಗ್ಯ ಸಮಸ್ಯೆಯಿದೆ. ಪ್ರತಿ 40 ಸೆಕೆಂಡಿಗೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಸಂಶೋಧನೆಗಳು ತಿಳಿಸಿಕೊಟ್ಟಿವೆ. ಹೀಗಾಗಿ 1992ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು. ಎಲ್ಲರಲ್ಲೂ ಮಾನಸಿಕ ಕಾಯಿಲೆ ಅಲ್ಪ ಪ್ರಮಾಣದಲ್ಲಿ ಇರುತ್ತದೆ. ಶೇ. 12ರಷ್ಟು ಪ್ರಮಾಣದ ಮಾನಸಿಕ ಖಿನ್ನತೆಯಿಂದ ಮದ್ಯಪಾನ , ಡ್ರಗ್ ಸೇವನೆಗೆ ಒಳಗಾಗುತ್ತಾರೆ ಎಂಬ ವರದಿಗಳಿವೆ ಎಂದು ಮಾಹಿತಿ ನೀಡಿದರು.


ಪ್ರಾಂಶುಪಾಲ ಬಿ. ಸದಾಶಿವೇಗೌಡ, ಆಪ್ತ ಸಮಾಲೋಚಕ ಎಂ.ಆರ್. ಶಂಭಾವಿ ಇನ್ನಿತರರು ಉಪಸ್ಥಿತರಿದ್ದರು.