ಜಿಲ್ಲೆ

ಮಾನವೀಯತೆ ಮೆರೆದ ಜಿಲ್ಲಾಧಿಕಾರಿ ಸುಶೀಲಾ

ಯಾದಗಿರಿ: ಜಿಲ್ಲೆಯ ಕೆಲಸ-ಕಾರ್ಯಗಳ ಒತ್ತಡದಲ್ಲಿ ಸದಾ ಇರುವ ಜಿಲ್ಲಾಧಿಕಾರಿಗಳು ಮಾನವೀಯತೆ ಕೆಲಸಕ್ಕೂ ಮುಂದಾಗುವ ಮೂಲಕ ಓರ್ವ ನಿರ್ಗತಿಕ ಮಾನಸಿಕ ಅಸ್ವಸ್ಥೆಯನ್ನು ಆರೈಕೆ ಕೇಂದ್ರಕ್ಕೆ ಸೇರಿಸುವ ಮೂಲಕ ಆ ಹಣ್ಣು ಜೀವ ನೆಮ್ಮದಿಯಿಂದ ಬದುಕುವಂತೆ ಮಾಡಿದ್ದಾರೆ.

ನಿರ್ಗತಿಕ ಮಹಿಳೆ ಗುರುಮಠಕಲ್ ಪಟ್ಟಣದ ಬೀದಿ ಬದಿಯಲ್ಲಿ ಅಲೆಯುತ್ತಿರುವುದು ಜಿ¯್ಲÁಧಿಕಾರಿ ಡಾ.ಸುಶೀಲಾ ಗಮನಿಸಿ ತಕ್ಷಣ ಆ ಮಹಿಳೆಯನ್ನು ಆರೈಕೆ ಕೇಂದ್ರಕ್ಕೆ ಸೇರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಸಂಬAಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗುರುಮಠಕಲ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹಿಳಾ ಮೇಲ್ವಿಚಾರಕಿ, ಜಿ¯್ಲÁ ಮಕ್ಕಳ ರP್ಷÀಣಾ ಘಟಕ ಸಿಬ್ಬಂದಿ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಆ ಮಹಿಳೆಯನ್ನು ಜಿ¯್ಲÁಧಿಕಾರಿಗಳ ಆದೇಶದ ಮೇರೆಗೆ ಪಟ್ಟಣದಲ್ಲಿನ ವಸತಿ ರಹಿತರ ಆಶ್ರಯ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

ಆಕೆಯ ಹೆಸರು ಸುರತಿಕ, ತಂದೆ ಶ್ರೀರಾಮï, ತಾಯಿ ರುಕ್ಮಣಿಭಾಯಿ ಎಂದು ಹೇಳಿದ್ದಾಳೆ. ದಯನೀಯ ಸ್ಥಿತಿಯಲ್ಲಿ ಖಿನ್ನತೆಗೊಳಗಾದಂತೆ ಕಂಡು ಬರುವ ಈಕೆ, ಮಾಸಿದ ಹರಕಲು ಬಟ್ಟೆ, ಗಂಟು ಕಟ್ಟಿದ ತಲೆ ಕೂದಲು ಹೊಂದಿದ್ದಳು.

ವಸತಿ ರಹಿತರ ಆಶ್ರಯ ಕೇಂದ್ರವನ್ನು ನಿರ್ವಹಣೆ ಮಾಡುತ್ತಿರುವ ಭಾರತಾಂತೆ ಶಿP್ಷÀಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಭೀಮಾಶಂಕರ ದೊಡ್ಡಮನಿ ಮತ್ತು ಸಂಸ್ಥೆ ಸಿಬ್ಬಂದಿ ವರ್ಗ ಆಕೆಯ ತಲೆ ಕೂದಲು ಕತ್ತರಿಸಿ, ಸ್ನಾನ ಮಾಡಿಸಿ ಒಳ್ಳೆಯ ಬಟ್ಟೆ ತೊಡಿಸಿz್ದÁರೆ. ಈಗ ಸಾಮಾನ್ಯ ಜನರಂತೆ ಹೊಸ ಬದುಕಿಗೆ ಕಾಲಿಡುವಂತೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಜಿಲ್ಲಾಧಿಕಾರಿಗಳ ಆ ಒಂದು ದೃಷ್ಟಿಯಿಂದ ಈಕೆ ಸಂಕಷ್ಟದಿAದ ಮುಕ್ತಿ ಹೊಂದುವAತೆ ಮಾಡಿದೆ. ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಭೀಮಣ್ಣ ವೈದ್ಯ ಅವರು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮಹಿಳೆಗೆ ಆರೋಗ್ಯ ತಪಾಸಣೆ ಮಾಡಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಲು ಕೇಂದ್ರದ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.