ಯಡೂರು ಗ್ರಾಮದ ಕಾಡಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಲಾಗಿದ್ದ ರೇಣುಕಾಚಾರ್ಯ ಜಯಂತಿಯ ಕಾರ್ಯಕ್ರಮದಲ್ಲಿ ಶ್ರೀಶೈಲ ಜಗದ್ಗುರು, ಗೌರಿಶಂಕರ ಶಿವಾಚಾರ್ಯರು, ಸುರೇಖಾ ಹಿರೇಮಠ, ಗೌರಿ ಅರಳಿಕಟ್ಟಿಮಠ ಇತರರಿದ್ದರು. 
ಜಿಲ್ಲೆ

ಮಾನವೀಯತೆ ಪಾಠ ಕಲಿಸಿದ ರೇಣುಕಾಚಾರ್ಯರು: ಶ್ರೀಶೆಲ ಪೀಠದ ಜಗದ್ಗುರು

ಮಾಂಜರಿ: ಮಾನವಕುಲಕ್ಕೆ ಮಾನವೀಯತೆ ಸಂದೇಶ ಸಾರಿದ ಮೊದಲ ವೀರಶೆವ ಧರ್ಮದ ಮಹಾನ್​ ಶರಣ ಜಗದ್ಗುರು ರೇಣುಕಾಚಾರ್ಯರು ಎಂದು ಶ್ರೀಶೆಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಯಡೂರು ಗ್ರಾಮದ ಕಾಡ ಸಿದ್ದೇಶ್ವರ ಸಂಸ್ಥಾನ ಮಠ ಮತ್ತು ವೀರಭದ್ರ ದೇವಸ್ಥಾನ ಮತ್ತು ಜಂಗಮ ಸಮುದಾಯದ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನಾವೆಲ್ಲರೂ ಭಾರತೀಯರು. ಯಾವುದೇ ಜಾತಿ ಭೇದವಿಲ್ಲದೆ ಎಲ್ಲರನ್ನೂ ಪ್ರೀತಿಸುವ ಜತೆಗೆ ಮಹನೀಯರ ತತ್ತಾ$್ವದರ್ಶ ಮತ್ತು ಧಾರ್ಮಿಕ ಶಿಣ ನೀಡಬೇಕು. ಸಮಾಜದಲ್ಲಿ ಗಂಡು&ಹೆಣ್ಣಿಗೆ ಸಮಾನ ಸ್ಥಾನಮಾನ ನೀಡಬೇಕು. ಮಕ್ಕಳಿಗೆ ಸರಿಯಾದ ಸಂಸ್ಕಾರ ಹೇಳಿಕೊಡಬೇಕು ಎಂದರು.

ಜಮಖಂಡಿಯ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೇಣುಕಾಚಾರ್ಯರು ಭೂಲೋಕದಲ್ಲಿ ಅಶಾಂತಿ ಸ್ಥಾಪನೆಯಾದಾಗ ಅದನ್ನು ಹೋಗಲಾಡಿಸಿ ಸದ್ಧರ್ಮ ಹುಟ್ಟುಹಾಕಿದವರು. ಶೆವ ಪರಂಪರೆ ಎತ್ತಿಹಿಡಿದ ರೇಣುಕಾಚಾರ್ಯರ ಜೀವನ ಮತ್ತು ಆದರ್ಶ ತಿಳಿಯಬೇಕು ಎಂದರು.

ಶ್ರೀಶೆಲ ಪೀಠದ ಜಗದ್ಗುರುಗಳ ಅಮತ ಹಸ್ತದಿಂದ ರೇಣುಕಾಚಾರ್ಯರ ೋಟೋ ಮತ್ತು ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ಮುಖಂಡರಾದ ಮಲ್ಲಪ್ಪ ಸಿಂಧೂರ, ಅಡವಯ್ಯ ಅರಳಿಕಟ್ಟಿಮಠ, ಮುತ್ತುರಾಜ ಮಠದ, ಮಹಾದೇವ ಲಕ್ಕಪ್ಪಗೊಳ, ಮಲ್ಲಯ್ಯ ಶಾಸ್ತ್ರಿಜಡೆ, ಮಹಾಲಿಂಗ ಶಾಸ್ತ್ರಿ ಭೀರಂಗಿ, ಮನೋಹರ ಪುಟಾಣಿ, ಶ್ರೀಶೆಲ ಶಾಸ್ತಿ, ಸುರೇಖಾ ಹಿರೇಮಠ, ಗೌರಿ ಅರಳಿಕಟ್ಟಿಮಠ, ಶಿಲ್ಪಾ ಜಡೆ, ಶ್ರೀದೇವಿ ಸಿಂಧೂರ, ರಾಜಶ್ರೀ ಲಕ್ಕಪ್ಪಗೊಳ ಇತರರಿದ್ದರು.