ಹಾಸನ : ಪ್ರತಿಯೊಬ್ಬ ವ್ಯಕ್ತಿ ಬದುಕಿನ ಎಲ್ಲಾ ಘಟ್ಟಗಳಲ್ಲೂ ಮಾನವ ಹಕ್ಕುಗಳು ನೆಲಸಿರುತ್ತವೆ. ಹುಟ್ಟಿನಿಂದಲೇ ತನ್ನ ಹಕ್ಕುಗಳಿಗೆ ಅರ್ಹನಾದ ಮಾನವನ ಬಹುಮುಖ್ಯವಾದ ಹಕ್ಕು ಬದುಕುವ ಸ್ವಾತಂತ್ರ್ಯ. ಇದು ಒಂದು ಪ್ರದೇಶ ಅಥವಾ ವ್ಯಕ್ತಿಗಳಿಗೆ ಸೀಮಿತವಾಗಿರುವುದಲ್ಲ. ಪ್ರಪಂಚದಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಅನ್ವಯಿಸುತ್ತವೆ ಎಂದು ಮಾನವ ಹಕ್ಕುಗಳ ಭಾರತೀಯ ಮಹಾ ಮೈತ್ರಿ ಅಧ್ಯಕ್ಷ ಎನ್.ವಿಶ್ವನಾಥ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಗರದ ಎಂ.ಜಿ ರಸ್ತೆ ಕ್ರೀಡಾಂಗಣದ ಬಳಿ ಇರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶನಿವಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ರಾಜ್ಯ ಶಾಸ್ತ್ರ ವಿಭಾಗದ ಮಾನವ ಹಕ್ಕುಗಳ ವೇದಿಕೆ , ಮಾನವ ಹಕ್ಕುಗಳ ಭಾರತೀಯ ಮಹಾ ಮೈತ್ರಿ, ಹಾಗೂ ರೋಟರಿ ಮಿಡ್ ಟೌನ್ ಇವರ ಸಹಯೋಗದಲ್ಲಿ ವಿಶ್ವ ಮಾನವ ಹಕ್ಕು ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾನವ ಹಕ್ಕುಗಳನ್ನು ವಿದ್ಯಾರ್ಥಿಗಳು ಮೊದಲು ತಿಳಿದುಕೊಳ್ಳಬೇಕು ಆಗ ಸ್ವತಂತ್ರೃಜೀವನವನ್ನು ನಡೆಸಲು ಸಾದ್ಯ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಮಾನವಹಕ್ಕು ಮತ್ತು ಕರ್ತವ್ಯ ಈ ಎರಡು ಜೀವನದಲ್ಲಿ ಬಹಳ ಮುಖ್ಯ, ಹಾಗಾಗಿ ಅವುಗಳನ್ನು ಹೇಗೆ ಮತ್ತು ಏಕೆ ಪಲಿಸಬೇಕು ಎಂಬುದನ್ನು ಮೊದಲು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ನಮ್ಮ ಸುಖ ಸಂತೋಷಕ್ಕೆ ಇರುವ ಹಕ್ಕನ್ನು ಬೇರೆಯವರು ಅಡ್ಡಿ ಪಡಿಸಬಾರದು. ಅದಕ್ಕಾಗಿದೆ ನಾವು ಶಿಕ್ಷಕರು ನೀಡಿದ ನುರಿತ ಶಿಕ್ಷಣವನ್ನು ಉತ್ತಮವಾಗಿ ಸದುಪಯೋಗ ಪಡೆದುಕೊಂಡು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಕಾಪಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಟಿ ಕೃಷ್ಣಕುಮಾರ್ ವಹಿಸಿದ್ದರು.
ರೋಟರಿ ಮಿಡ್‌ಟೌನ್ ಅಧ್ಯಕ್ಷ ರೋ. ರಮಾನಂದ, ರೋಟರಿ ಮಿಡ್‌ಟೌನ್ ಕಾರ್ಯದರ್ಶಿ ಸಿದ್ದೇಶ್ವರ, ಕೆ.ವಿ ರೂಪ , ಸಿ.ಸುನಿತಾ ಇತರರು ಇದ್ದರು