filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37; 
ಜಿಲ್ಲೆ

ಮಾನವ ಹಕ್ಕುಗಳಲ್ಲಿ ಮಕ್ಕಳನ್ನು ಪರಿಗಣಿಸಿ

ಯಾದಗಿರಿ: ಮಕ್ಕಳು ಈ ದೇಶದಲ್ಲಿ ಆಸ್ತಿ ಮತ್ತು ಸಂಪತ್ತಾಗಿದ್ದು, ಮಾನವ ಹಕ್ಕುಗಳಲ್ಲಿ ದೊಡ್ಡವರ ಜತೆಗೆ ಮ್ಕಕಳ ಹಕ್ಕುಗಳು ಕೂಡ ಪರಿಗಣನೆ ಮಾಡಬೇಕು ಎಂದು ಜಿ¯್ಲÁ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಮರಿಯಪ್ಪ ಹೇಳಿದರು.

ಜಿ¯್ಲÁ ಬಾಲ ಭವನ ಸಮಿತಿ, ರಾಜ್ಯ ಬಾಲ ಭವನ ಸೊಸೈಟಿ ಮತ್ತು ಶಾಲಾ ಶಿP್ಷÀಣ ಮತ್ತು ಸಾP್ಷÀರತಾ ಇಲಾಖೆ ಸಹಯೋಗದಲ್ಲಿ ಲಿಂಗೇರಿ ಕೊನಪ್ಪ ಆರ್.ನಾಡಗೌಡ ಸ್ಮಾರಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಮಕ್ಕಳು ನಾಳೆಯ ಪ್ರಜೆಗಳಲ್ಲ. ಅವರು ಇಂದಿನ ಪ್ರಜೆಗಳೇ. ಅವರನ್ನು ಬೆಳೆಸುವ ರೀತಿಯಲ್ಲಿ ದೇಶದ ಪ್ರಗತಿ, ಅಭಿವೃದ್ಧಿ ಅಡಗಿದೆ ಎಂದರು. ಇಂದು ಬಹುತೇಕ ಮಕ್ಕಳು ಮೊಬೈಲ್ ಗೀಳಿಗೆ ಅಂಟಿಕೊAಡಿದ್ದಾರೆ. ಇದು ಅವರ ಓದಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಾರಣ, ಪಾಲಕರು ಬೇರೆ, ಬೇರೆ ಹವ್ಯಾಸಗಳಲ್ಲಿ ಮಕ್ಕಳನ್ನು ಬೆಳೆಯಲು ಬೀಡಬೇಕು ಅಂದಾಗ ಹೊಸತನ ಬೆಳೆದು ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಮಕ್ಕಳು ಕಠಿಣ ಶ್ರಮವಹಿಸಿ ಅಭ್ಯಾಸ ಮಾಡಬೇಕು. ವಿದ್ಯಾರ್ಥಿ ಜೀವನ ವ್ಯರ್ಥ ಮಾಡಿಕೊಳ್ಳದೆ ಅದರ ಅಮೂಲ್ಯತೆ ಅರಿತು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಶಿರಸಗಿ ಮಾತನಾಡಿ, ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಇಂದಿನ ದಿನಮಾನದಲ್ಲಿ ಮಕ್ಕಳು ಸ್ವಯಂ ರP್ಷÀಣೆಗಾಗಿ ಕರಾಟೆ, ಈಜು ಕಲಿಯುವುದು ಬಹಳ ಅಗತ್ಯವಿದೆ. ಅದಕ್ಕಾಗಿ ಅಭ್ಯಾಸದ ಜತೆಗೆ ಇಂತಹ ಚಟುವಟಿಗಳಲ್ಲಿ ತೊಡಿಸಿಕೊಳ್ಳಬೇಕು. ಕಲಾಪ್ರತಿಭೆ ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ಅಡಗಿರುವ ವಿವಿಧ ಕಲೆ ಹೊರತರುವ ನಿಟ್ಟಿನಲ್ಲಿ ಇಂತಹ ಸ್ವರ್ಧೆಗಳು ಅವಶ್ಯವಾಗಿದೆ ಎಂದರು.

ಈ ವೇಳೆ ಮುಖ್ಯಗುರು ಮಲ್ಲಮ್ಮ, ಮಿಷನ್ ಶಕ್ತಿ ಯೋಜನೆ ಜಿ¯್ಲÁ ಸಂಯೋಜಕ ಯಲ್ಲಪ್ಪ, ಹಿರಿಯ ಮೇಲ್ವಿಚಾರಿಕಿ ಉಷಾ ಸೇರಿ ಇತರರಿದ್ದರು. ಜಿ¯್ಲÁ ಬಾಲ ಭವನ ಕಾರ್ಯಕ್ರಮ ಸಂಯೋಜಕ ಅನೀಲಕುಮಾರ ಸ್ವಾಗತಿಸಿದರು. ಸಮೂಹ ನೃತ್ಯ ಸೇರಿದಂತೆಯೇ ವಿವಿಧ ಸ್ಫರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿಪತ್ರ ಹಾಗೂ ಬಹುಮಾನ ವಿತರಿಸಲಾಯಿತು.