ಶೃಂಗೇರಿ: ದೇಶದ ಎಲ್ಲ ಸಂಪತ್ತು ಬಳಸಿಕೊಂಡರೂ ಮಾನವ ಸಂಪನ್ಮೂಲ ಹೆಚ್ಚಾಗಿ ಬಳಸುವಲ್ಲಿ ಸೋತಿದ್ದೇವೆ. ನಾವು ಎತ್ತಲೋ ಸಾಗುತ್ತಿದ್ದೇವೆ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಜೆಸಿಬಿಎಂ ಕಾಲೇಜಿನಲ್ಲಿ ಕುವೆಂಪು ವಿವಿ ಮಟ್ಟದ ಅಂತರ್‌ಕಾಲೇಜು ಎನ್‌ಎಸ್‌ಎಸ್ ಶಿಬಿರದಲ್ಲಿ ದಿಕ್ಸೂಚಿ ಭಾಷಣ ಮಾತನಾಡಿ, ಅಧ್ಯಾತ್ಮ ಹಾಗೂ ಧಾರ್ಮಿಕ ಶಕ್ತಿಯನ್ನು ಜಗತ್ತು ಒಪ್ಪಿಕೊಂಡಿದೆ. ವಿವೇಚನೆ, ಆಲೋಚನೆ, ಧನ್ಯತೆಯಿಂದ ಇರುವುದು ಮನುಷ್ಯನಲ್ಲಿ ಮಾತ್ರ. ಪದವಿ ಗಳಿಸಿ ಸರ್ಕಾರಿ ನೌಕರರಾಗುವುದೇ ಗುರಿಯಾಗಿದೆ. ಉತ್ತಮ ಬದುಕು ನಮ್ಮದಾಗಬೇಕಾದರೆ ಸರ್ಕಾರದ ಹಣಕ್ಕೆ ಕೈಚಾಚುವ ಬದಲು ಉದ್ಯೋಗ ಮಾಡಬೇಕು ಎಂದು ಸಲಹೆ ನೀಡಿದರು. ಪ್ರಾಚಾರ್ಯ ಡಾ. ಸ್ವಾಮಿ ಎಂ., ರಾಮನಗರ ಜಿಲ್ಲೆ ರಾಮಕೃಷ್ಣ-ವಿವೇಕಾನಂದ ಆಶ್ರಮದ ಶ್ರೀ ಪರಮಾನಂದ ಜೀ ಮಹಾರಾಜ್, ಕುವೆಂಪು ವಿವಿ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ, ವಿಶ್ವಸ್ಥಮಂಡಳಿ ಸದಸ್ಯರಾದ ಕೆ.ಎಂ.ಮಂಜುನಾಥ್, ಪುಷ್ಪಾ ಲಕ್ಷ್ಮೀನಾರಾಯಣ್, ಹಿರಿಯ ವಿದ್ಯಾರ್ಥಿಗಳ ಸಂಘ ಅಧ್ಯಕ್ಷ ಸಂದೇಶ್ ಹೆಗಡೆ, ಎನ್‌ಎಸ್‌ಎಸ್ ಅಧಿಕಾರಿಗಳಾದ ಪ್ರಶಾಂತ್, ಸಂತೋಷ್‌ಕುಮಾರ್, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಿಂದ 150ಕ್ಕೂ ಹೆಚ್ಚು ಶಿಬಿರಾರ್ಥಿಗಳು ಇದ್ದರು.