ಬೇಲೂರು : ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶರನ್ನವರಾತ್ರಿ ಧರ್ಮ ಸಮ್ಮೇಳನದ ಮೂರನೇ ದಿನಕ್ಕಾಗಿ ಶ್ರೀ ಮದ್ ರಂಭಾಪುರಿ ಜಗದ್ಗುರುಗಳನ್ನು ಬೃಹತ್ ವೇದಿಕೆಯ ಮಾನವ ಮಂಟಪಕ್ಕೆ ಮಠದ ಸಂಪ್ರದಾಯದಂತೆ ವಾದ್ಯ ಗೋಷ್ಠಿಯೊಂದಿಗೆ ಕರೆ ತಂದು ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಸಮ್ಮೇಳನ ಪ್ರಾರಂಭಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ಶಾಂತಿ ನೆಮ್ಮದಿ ಸರ್ವರಿಗಾಗಲಿ. ಇಂದು ಮತ ಯಾವುದು ಧರ್ಮ ಯಾವುದು ಎಂಬ ಜಿಜ್ಞಾಸೆ ನಮ್ಮಲ್ಲಿ ಬಂದಿರುವುದುಂಟು. ಮತ ಧರ್ಮ ಹಾಗಲು ಸಾಧ್ಯವಿಲ್ಲ. ಎಷ್ಟು ಮತಿ ಇದೆಯೊ ಅಷ್ಟು ಮತಗಳಿವೆ. ಜಗತ್ತಿಗೆ ಧರ್ಮ ಬೇರೆ ಇರುವುದಕ್ಕೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲೆ ಜಗದ್ಗುರುಗಳು ಮಾನವ ಧರ್ಮಕ್ಕೆ ಜಯವಾಗಲಿ ಎಂದಿರುವುದು. ನೀನು ಬೇರೆ ನಾನು ಬೇರೆ ಎನ್ನುವ ಅಹಂಬಾಹ ನಮ್ಮನ್ನೆ ಕೊಲ್ಲುತ್ತದೆಯೇ ಹೊರತು ಧರ್ಮವಲ್ಲ. ಬಸವಣ್ಣರ ಹೇಳಿವರುವ ಹಾಗೆ ತನ್ನಂತೆ ಇತರರಿಗೆ ಬಗೆದರೆ ನಾನು ನಾನೇ ಎಂದು ಹೇಳಿದರೆ ಅದು ಧರ್ಮವಲ್ಲ. ಕಾಯುವುದೇ ಧರ್ಮ, ಕೊಲ್ಲುವುದು ಅದರ್ಮ. ನಮಗೆ ಅಸ್ತಿತ್ವ ಮತ್ತು ಅಸ್ಮಿತೆ ನಡುವೆ ಅಹಂಕಾರ ಬಂದಾಗ ಮಾತ್ರ ಸಂಘರ್ಷ ಪ್ರಾರಂಭವಾಗುತ್ತದೆ. ಆ ಸಂಘರ್ಷ ವಿನಾಶಕ್ಕೆ ಕೊಂಡೊಯ್ಯತ್ತದೆ. ಮತಗಳ ಕಾರಣದಿಂದ ಮತಾಂದತೆ ತೊಡೆದು ಹೋಗುತ್ತದೆ. ಅಹಂಕಶಾರದಿಂದಲೇ ಯುದ್ದಗಳು, ನಮ್ಮ ಸಂಸ್ಕೃತಿಯ ನಾಶವಾಗುತ್ತಿದೆ. ದೇಶದಲ್ಲೂ ಸಹ ಬಯೋತ್ಪದಾಕರು ಕಾಶ್ಮೀರದಲ್ಲಿ ಪಂಡಿತರನ್ನು ಕೊಂದರೆ ನಮಗೇನು ಎಂದು ಅಸಹಕಾರ ಗೊಂಡರೆ ನಮಗೇನು ಸಂಬಂಧ ಇದೆ ಅಂದು ಕೊಡರೆ ಬೇರೆ ಬೇರೆ ಭಾಷೆಗಳಿವೆ. ಏನೂ. ಈ ವಿಚಾರವಾಗಿ ನಾವುಗಳೂ ಪರಸ್ಪರ ದ್ವೇಶದಿಂದ ವಿರುದ್ಧ ನಿಂತರೆ ಏನಾಗುತ್ತದೆ. ನಾವು ಒಗ್ಗಟ್ಟಾಗಿದ್ದರೆ ಏನನ್ನಾದರೂ ಸಾಧಿಸಬಹುದು. ಆದರೆ ಒಗ್ಗಟ್ಟಾಗದಿದ್ದರೆ ನಾವು ನಮ್ಮ ಭಾಷೆ ಬಿಟ್ಟ್ರೆ ನಮ್ಮ ದೇಶ ಏನಾಗಬಹುದು. ಆದರೆ ನಮ್ಮ ಜಗದ್ಗುರುಗಳು ದೇಶ ಮತ್ತು ಧರ್ಮವನ್ನು ಒಗ್ಗುಡಿಸುವಂತ ಸಂದೇಶವನ್ನು ಮತ್ತು ಮಾನವ ಧರ್ಮವನ್ನು ಸಾರುತಿದ್ದಾರೆ ಎಂದರು.
ಕಾನೂನು ಸಂಸದಿಯ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾದುಸ್ವಾಮಿ ಮಾತನಾಡಿ, ಹುಟ್ಟು ಆಕಸ್ಮಿಕ ಸಾವು ಖಚಿತ, ಜಾತಿ ಧರ್ಮ ಸಂಸ್ಕಾರ ನಾವು ಪಡೆದುಕೊಂಡು ಬರುವುದು ಧರ್ಮವಲ್ಲ. ಯಾರಿಗೆ ಈಶ್ವರನಿಗೆ ಧರ್ಮದಲ್ಲಿ ನಂಬಿಕೆ ಇದೆಯೋ ಅವರೆಲ್ಲ ವೀರಶೈವರೆ. ಇಂದು ನಾವು ನಾವಾಗೇ ಇರಬಾರು. ಜೊತೆಯಲ್ಲಿರುವವರನ್ನು ಮೇಲಕ್ಕೆ ಕರೆದೊಯ್ಯಬೇಕು ಎಂಬುದು ಧರ್ಮದ ಶ್ರೇಷ್ಟ ಚಿಂತನೆಯಾಗಿದೆ. ನಮ್ಮ ಮೇಲೆ ದೊಡ್ಡ ಜವಬ್ದಾರಿ ಇದೆ. ಆ ಜವಬ್ದಾರಿ ಇದ್ದಿದ್ದರೆ ಈಗಿನ ಕ್ಷೋಬೆಗಳು ನಡೆಯುತ್ತಿರಲಿಲ್ಲ. ನಾವು ಎಲ್ಲೋ ಒಮದು ಕಡೆ ಮಡಿವಂತರಾಗಿ ಬದುತಿದ್ದೇವೆ ಎನಿಸುತ್ತಿದೆ. ಈ ಧರ್ಮದಲ್ಲಿ ಮಡಿವಂತಿಕೆಯನ್ನು ಹೋಗಲಾಡಿಸುವಲ್ಲಿ ಮುಂದಿದ್ದೇವೆ. ನಮ್ಮಲ್ಲಿ ಮಹಿಳೆಯರಿಗೆ ಹೆಣ್ಣು-ಗಂಡು ಬೇದ ಇರಬಾರದು ಎಂದು ಹೇಳಿದ ಧರ್ಮವಾಗಿದೆ. ನಮ್ಮಲ್ಲಿ ಮಹಿಳೆಯರಿಗೆ ಹೆಚ್ಚಿನ ಆಧ್ಯತೆ ನೀಡುತ್ತಿರುವುದು ನಮ್ಮ ಧರ್ಮದ ಶ್ರೇಷ್ಟತೆಯಾಗಿದೆ. ಅಲ್ಲದೆ ಇಲ್ಲಿ ಎಲ್ಲರೂ ಯಾರೂ ಮೇಲಲ್ಲ ಕೀಳಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮಲ್ಲಿ ಅನೇಕ ಪಂಗಡಗಳಿವೆ ಅವರನ್ನೂ ನಮ್ಮವರು ಎಂದು ತಿಳಿದು ಒಂದಾಗಿ ನಡೆದಾಗ ಮಾತ್ರ ಎಲ್ಲೂ ಸಲ್ಲುತ್ತಾರೆ. ಮತ್ತು ನಾವು ಹೆಚ್ಚಿನ ಜ್ಞಾನಾರ್ಜನೆ ಮಾಡಿದರೆ ಮನಸ್ಸಿನಲ್ಲಿ ಉತ್ತಮ ಬೆಳವಣಿಗೆಯಾಗುತ್ತದೆ. ಅದನ್ನು ಬಿಟ್ಟು ಅಹಂ ತುಂಬಿ ಕೊಂಡರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವು ಏನು ಇಂದು ದೇವರೆಂದು ಗುರುಗಳನ್ನು ಕಾಣುತ್ತೇವೊ ಅಲ್ಲಿ ದೇವರನ್ನು ಕಾಣಬೇಕು. ಜಗದ್ಗುರುಗಳು ಬೋದಿಸುವ ವಿಚಾರಗಳನ್ನು ಮನಸ್ಸಿಗೆ ತೆಗೆದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಮಾತನಾಡಿ, ಜಗದ್ಗುರುಗಳು ಪ್ರಪಂಚಕ್ಕೆ ಸಾರಿರುವ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಸಾಂತಿ, ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ, ಶಾಂತಿ ಸಮೃದ್ದಿ ಸರ್ವಾರಿಗಾಗಲಿ ಎಂಬ ವೇದ ವಾಕ್ಯ ಎಷ್ಟು ಸಮಂಜಸವಾಗಿದೆ ಎಂಬುದನ್ನು ನಾವುಗಳು ಅರಿತು ಬಾಳಬೇಕಿದೆ. ಅಲ್ಲದೆ ಬೇಲೂರು ಕ್ಷೇತ್ರದ ಜನತೆ ನನ್ನನ್ನು ಮೂರು ಬಾರಿ ಸಾಸಕರನ್ನಾಗಿ ಮಡಿ, ಸಚಿವನಾಗಿ ಮಡಿದ್ದಾರೆ. ಅವರ ಋಉಣ ನನ್ನ ಮೇಲಿದೆ. ನಾನು ಈಗ ಬೇರೆ ಕ್ಷೇತ್ರದಲ್ಲಿದ್ದರು ಬೇಲುರಿನ ಸಮಸ್ಯೆಗಳ ಬಗ್ಗೆ ಇಲ್ಲಿನ ಸಾಸಕ ಕೆ.ಸೆ.ಲಿಂಗೇಶ್ ಜತೆ ಸಧನದಲ್ಲಿ ಚರ್ಚಿಸಿದ್ದೇವೆ. ಮತ್ತು ಇಲ್ಲಿನ ಕಾಡಾನೆ ಸಮಸ್ಯೆ ಸೇರಿದಂತೆ ಅಭಿವೃದ್ಧಿ ಜೆಲಸಗಲನ್ನು ಒಟ್ಟಾಗಿ ಹೊರಟ ಮಾಡಿದ್ದೇವೆ ಎಂದರು.
ಕೃಷಿಕನ ನೆಲೆ-ಬೆಲೆ ವಿಷಯವಾಗಿ ಉಪನ್ಯಾಸ ನೀಡಿದ ಚಿಕ್ಕಮಗಳೂರಿನ ಚಟ್ನಳ್ಳಿ ಮಹೇಶ ಮಾತನಾಡಿ, ಭಾರತ ದೇಶ ಹಳ್ಳಿಗಳ ದೇಶ. ಹಳ್ಳಿಗಳು ಉದ್ಧಾರವಾದರೆ ದೇಶದ ಉನ್ನತಿ ಸಾಧ್ಯ. ನೂರಕ್ಕೆ 70 ಷ್ಟು ಜನರು ಕೃಷಿಕರೇ ಆಗಿದ್ದಾರೆ. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ರೈತರ ಬಾಳು ಕಷ್ಟದಾಯಕವಾಗಿದೆ. ಆಧುನಿಕ ಕೃಷಿ ಕೈಗೊಳ್ಳುವ ಮತ್ತು ಸರ್ಕಾರಗಳಿಂದ ರೈತರ ಕಷ್ಟಗಳು ಮತ್ತು ಇರುವ ಸಮಸ್ಯೆಗಳು ದೂರವಾಗಬೇಕು ಎಂದರು
ನೇತೃತ್ವ ವಹಿಸಿದ ಅರಕಲಗೂಡು ದೊಡ್ಡಮಠದ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮದ ಮೂಲ ಕೇಂದ್ರವಾಗಿರುವ ಶ್ರೀ ರಂಭಾಪುರಿ ಧರ್ಮ ಪೀಠದ ದಸರಾ ಹಬ್ಬ ನಾಡಿನ ಜನತೆಗೆ ದಿಕ್ಸೂಚಿಯಾಗಿದೆ. ಬೇಲೂರು ತಾಲೂಕಿನ ಭಕ್ತರ ಸೌಭಾಗ್ಯವಷ್ಟೇ ಅಲ್ಲ ಎಲ್ಲರ ಬಾಳಿನ ಶ್ರೇಯಸ್ಸು ಅಡಗಿದೆ ಎಂದರು.
ಮಳಲಿ ಸಂಸ್ಥಾನ ಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಸಮ್ಮೇಳನ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಸ್.ಲಿಂಗೇಶ್, ಕಾಯಾಧ್ಯಕ್ಷ ಕೊರಟಿಕೆರೆ ಪ್ರಕಾಶ, ಸಣ್ಣ ನೀ.ಇ. ಕಾರ್ಯದರ್ಶಿ ಸಿ.ಮೃತ್ಯುಂಜಯಸ್ವಾಮಿ, ಕ.ನೀ.ನಿಗಮದ ವ್ಯ.ನಿರ್ದೇಶಕ ಮಲ್ಲಿಕಾರ್ಜುನ ಬಿ.ಗುಂಗೆ, ರಾಜ್ಯ ಹೆ.ಅ.ಇಲಾಖೆ ಮು.ಯೋಜನಾಧಿಕಾರಿ ಶಿವಯೋಗಿ ಹಿರೇಮಠ, ದಸರಾ ಸಮಿತಿ ಗೌರವಾಧ್ಯಕ್ಷ ಸಿ.ಎಮ್.ನಿಂಗರಾಜು, ಮಹಿಳಾ ಸಮಿತಿ ಅಧ್ಯಕ್ಷೆ ಅನ್ನಪೂರ್ಣ, ಕಾಂತರಾಜು, ನಂದೀಶ ಹೆಚ್.ಎಮ್., ಬಿ.ಪಿ.ಧರಣೇಂದ್ರ, ಟಿ.ಎಸ್.ಗುರುದೇವ, ರವಿಕುಮಾರ್, ಅಕ್ಕಿ ರಾಜು, ಸುರೇಶ್ ಎಮ್.ಎಮ್., ಎ.ಎಸ್.ಬಸವರಾಜ್, ಮಲ್ಲೇಶ್, ಸಂಜಯ್ ಸೇರಿದಂತೆ ಇತರರಿದ್ದರು.
ಸಣ್ಣ ನೀ.ಇ., ಕಾರ್ಯದರ್ಶಿ ಸಿ. ಮೃತ್ಯುಂಜಯಸ್ವಾಮಿ, ಹೊಳೆನರಸೀಪುರದ ಆರ್. ಜಯಶಂಕರಪ್ಪನವರು, ಹುಬ್ಬಳ್ಳಿ ತಾರಿಹಾಳದ ಶಕುಂತಲಾ-ಬಸಯ್ಯ ವಿರಕ್ತಮಠ ಇತರರಿದ್ದರು.
ಈ ವರ್ಷದ ಶ್ರೀರಂಭಾಪುರಿ ಯುವಸಿರಿ ಪ್ರಶಸ್ತಿಯನ್ನು ಅಖಿಲ ಭಾರತ ವೀರಶೈವ ವೇದಿಕೆ ಅಧ್ಯಕ್ಷ ಜಯಂತ್ ಕುಮಾರ್ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಪ್ರದಾನ ಮಾಡಿದರು.