ಜಿಲ್ಲೆ

ಮಾನವ ದಿನಗಳನ್ನು 150ಕ್ಕೆ ಹೆಚ್ಚಿಸಿ

ಸಂಡೂರು: ವಡ್ಡು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕೂಲಿಕಾರರು ಕೆಲಸದ ಸ್ಥಳದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ತಾಪಮಾನ ಹೆಚ್ಚಿರುವ ಹಿನ್ನೆಲೆಯಲ್ಲಿ ಕೆಲಸದ ಅಳತೆ ಪ್ರಮಾಣ ಕಡಿಮೆಗೊಳಿಸುವಂತೆ ಆಗ್ರಹಿಸಿದರು.

ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕಿ ಅಕ್ಕಮಹಾದೇವಿ ಮಾತನಾಡಿ, ಬಳ್ಳಾರಿ ತಾಪಮಾನ ಹೆಚ್ಚಿರುವ ಜಿಲ್ಲೆಯಾಗಿದ್ದು, ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಅಳತೆ ಪ್ರಮಾಣ ಕಡಿಮೆಗೊಳಿಸಬೇಕು. ಮಾನವ ದಿನಗಳನ್ನು 150ಕ್ಕೆ ಹೆಚ್ಚಿಸಬೇಕು. ಗುದ್ದಲಿ, ಸಲಿಕೆ ವೆಚ್ಚಕ್ಕೆ ಹೆಚ್ಚುವರಿ 50 ರೂ. ಕೊಡಬೇಕೆಂದು ಒತ್ತಾಯಿಸಿದರು.

ಕೆಲಸದ ಸಂದರ್ಭದಲ್ಲಿ ಕಾರ್ಮಿಕರು ಮೃತಪಟ್ಟರೆ ನೀಡಲಾಗುವ ಪರಿಹಾರವನ್ನು 2ರಿಂದ 5 ಲಕ್ಷ ರೂ.ಗೆ ಹೆಚ್ಚಿಸಬೇಕು. ಎನ್‌ಎಂಎಂಎಸ್ ಒಂದು ಬಾರಿ ಹಾಕಲು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಅಕ್ಕಮಹಾದೇವಿ ಆಗ್ರಹಿಸಿದರು.

ಸಂಘದ ಕಾರ್ಯಕರ್ತೆ ಅರುಣಾ ಕಂಪ್ಲಿ, ಕಾರ್ಮಿಕರಾದ ಹಂಪಕ್ಕ, ರೇಖಾ ವಡ್ಡಟ್ಟಿ, ಮಹೇಶಮ್ಮ, ರುದ್ರಮ್ಮ, ಕಾಮಾಕ್ಷಿ, ಲಕ್ಷ್ಮೀ, ರತ್ನಮ್ಮ, ಚನ್ನಮ್ಮ, ಅನಿತಮ್ಮ, ರೇಖಾ, ಶಾರದಮ್ಮ, ಗೀತಾ, ನಾಗಮ್ಮ, ತಿಮ್ಮಕ್ಕ, ಬಸ್ಸಮ್ಮ, ರೇಷ್ಮಾ, ಉಮೇಶ, ಎರಿಸ್ವಾಮಿ, ಬಾಣಪ್ಪ ಇತರರಿದ್ದರು.