ಮೈಸೂರು: ಮಾನವ ಕಳ್ಳ ಸಾಗಣೆ ತಡೆ ಕುರಿತು ಅರಿವು ಮೂಡಿಸಲು ಒಡನಾಡಿ ಸೇವಾ ಸಂಸ್ಥೆ ವತಿಯಿಂದ ನಗರ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ 17ನೇ ಅಂತಾರಾಷ್ಟ್ರೀಯ ಯೋಗ ಕಾರ್ಯಕ್ರಮವನ್ನು ನಡೆಯಿತು.
ಯೋಗವನ್ನು ಒಂದು ವಾನವೀಂು ಸಾಧನವನ್ನಾಗಿ ಬಳಸಿ, ಮಾನವ ಕಳ್ಳ ಸಾಗಣೆ ಹಾಗೂ ಲೈಂಗಿಕ ಶೋಷಣೆ ವಿರುದ್ಧ ಎಲ್ಲ ದೇಶಗಳ ಸಂಸ್ಕೃತಿ ಹಾಗೂ ಗಡಿಗಳನ್ನು ದಾಟಿ ಒಂದು ಆಂದೋಲನವನ್ನು ರೂಪಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಭಾರತ, ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾ, ಹಾಲೆಂಡ್, ಮೆಕ್ಸಿಕೋ, ಸ್ಪೀಡನ್, ್ರಾನ್ಸ್, ಅರ್ಜೆಂಟೈನಾ, ಕೆನಡಾ, ಇಸ್ರೇಲ್,ಫಿನ್‌ಲ್ಯಾಂಡ್ ಸೇರಿದಂತೆ 40 ದೇಶಗಳ 180ಕ್ಕೂ ಹೆಚ್ಚು ಭಾಗಗಳಲ್ಲಿ ಏಕಕಾಲದಲ್ಲಿ ಯೋಗ ಪ್ರದರ್ಶನ ನಡೆಯಿತು.
ಒಡನಾಡಿಯ ಕಾರ್ಯಕ್ರಮಗಳಿಗೆ ನೈತಿಕ, ಸಾವಾಜಿಕ ಬೆಂಬಲವನ್ನು ಕ್ರೋಡೀಕರಿಸುವುದು ಇದರ ಉದ್ದೇಶವಾಗಿತ್ತು. ವಾನವೀಯ ಸವಾನತೆಗಾಗಿ ‘ಒಂದು ದಿನ ಒಂದು ಧ್ವನಿ’ ಎಂಬ ಆಶಯದೊಡನೆ ವಿಶ್ವಾದ್ಯಂತ ಒಂದು ಧ್ವನಿಯನ್ನು ಹೊರಡಿಸಲು ಯೋಗವನ್ನು ಒಡನಾಡಿ ಸಂಸ್ಥೆ ಮಾಧ್ಯಮವಾಗಿ ಬಳಕೆ ಮಾಡಿಕೊಂಡಿತು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾತನಾಡಿ, ದೇಶದಲ್ಲಿ ಭಿನ್ನ ಧ್ವನಿಗಳ ವಿಷಮ ಪರಿಸ್ಥಿತಿಯಲ್ಲಿ ಒಡನಾಡಿ ಸಂಸ್ಥೆಯು ‘ವಿಶ್ವವೆಲ್ಲ ಒಂದೇ’ ಎಂದು ವಾನವೀಯ ಸಂದೇಶ ಸಾರುತ್ತಿದೆ. ಸತ್ಯವನ್ನು ಬಯಲು ಮಾಡುವ ಕೆಲಸ ಮಾಡುತ್ತಿದೆ. ಇದಕ್ಕೆ ಜನರು ಕೈ ಜೋಡಿಸಬೇಕು ಎಂದರು
ಯೋಗ ನೃತ್ಯಗಳು, ಸಂವಿಧಾನ ಆಶಯ- ವ್ಯಂಗ್ಯ ಎಂಬ ಬೀದಿ ನಾಟಕ ಪ್ರದರ್ಶನ ವಾಡಿದರು. ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಸ್ಟಾೃನ್ಲಿ, ಪರಶು, ವಿದ್ಯಾರ್ಥಿ ಮುಖಂಡರಾದ ಸಂಜನಾ, ಲಂಡನ್‌ನ ಅಡ್ವೇಚರ್ ಆಶ್ರಮದ ಜೇನ್ ಲೀಚ್, ಗ್ಯಾರಿ, ಬೆಸ್ಟಿ ಲೀಚ್, ರಾಜ್ಯ ರೈತ ಸಂಘದ ಹೊಸಕೋಟೆ ಬಸವರಾಜು, ಯೋಗ ಒಕ್ಕೂಟದ ಮೂರ್ತಿ, ಪ್ರದೀಪ್, ಶಶಾಂಕ್ ಇನ್ನಿತರರು ಇದ್ದರು.