ಸವದತ್ತಿ: ಅಳಿಯದೆ ಉಳಿದ ಭಾರತ ಸನಾತನ ಸಂಸ್ಕೃತಿಯಲ್ಲಿ ಜನಜೀವನ ಸರಳೀಕೃತವಾಗಿಸಲು, ಮಾನವ ಕಲ್ಯಾಣದ ಉದ್ದೇಶದಿಂದ ಬುದ್ಧ, ಮಹಾವೀರ, ಬಸವಣ್ಣರಂತಹ ಮಹಾನ್ ಚೇತನರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಪಿಐ ಕರುಣೇಶಗೌಡ ಜೆ. ಹೇಳಿದರು.
ಇಲ್ಲಿನ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸವದತ್ತಿ ಬಸವ ಭಕ್ತರಿಂದ ಶರಣ ಸಂಗಮದ 25 ಮಾಸಿಕ ಹುಣ್ಣಿಮೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಬಹತ್ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಜಾತಿ, ಆರ್ಥಿಕ, ಸಾಮಾಜಿಕ ಸಮಾನತೆ ತಳಹದಿಯಲ್ಲಿ ನಿರ್ಮಾಣವಾದ ಅನುಭವ ಮಂಟಪದಲ್ಲಿ ಮೊದಲ ಬಾರಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಲಾಗಿದೆ ಎಂದರು.
ಶರಣ ಸಂಗಮದಿಂದ ಪಿಐ ಕರುಣೇಶಗೌಡ ಜೆ., ಟಿಎಚ್‌ಒ ಡಾ.ಶ್ರೀಪಾದ ಸಬನೀಸ್, ಡಾ.ಸವಿತಾ ಸಬನೀಸ್, ಪ್ರವೀಣ ಪಟ್ಟಣಶೆಟ್ಟಿ, ಕಸ್ತೂರಿ ಹೂಲಿ ಹಾಗೂ ಪ್ರಮುಖರನ್ನು ಸತ್ಕರಿಸಲಾಯಿತು. ಶಿರಗುಪ್ಪಿಯ ಬಸವ ಮಂಟಪದ ಬಸವರಾಜ ವೆಂಕಟಾಪುರ ಶರಣರು ಸಾನ್ನಿಧ್ಯ ವಹಿಸಿದ್ದರು. ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮಹಾಂತೇಶ ಗುಡಸ, ರಾಷ್ಟ್ರೀಯ ಬಸವದಳದ ಕೆ. ಶರಣ ಪ್ರಸಾದ, ಬಸವರಾಜ ಕಪ್ಪನ್ನವರ, ಬಸವರಾಜ ಲಿಂಗಾಯತ, ನಾಗಪ್ಪ ಪ್ರಭುನವರ, ಎಲ್.ಎಸ್. ನಾಯಕ ಇತರರು ಇದ್ದರು.
ಸರ್ಕಾರಿ ಶಾಲೆ ನಂ.5ರಲ್ಲಿ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ನೂರಾರು ಜನರು ತಪಾಸಣೆ ಮಾಡಿಸಿಕೊಂಡರು. ಬೆಳ್ಳುಬ್ಬಿ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು ಮಾಹಿತಿ ನೀಡಿದರು.