ಸುಂಟಿಕೊಪ್ಪ: ಮಾದಾಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿ.ಆರ್.ಮಾನಸಾ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿ.ನಿರೂಪಾ ಅವರು ಜ.5 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಿತು. ಬಿ.ಆರ್. ಮಾನಸಾ ಅವರು ಮಾತ್ರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ಸೋಮವಾರಪೇಟೆ ತಾಲೂಕು ಪಂಚಾಯಿತಿ ಇಒ ಜಯಣ್ಣ ಅವಿರೋಧವಾಗಿ ಆಯ್ಕೆ ಘೋಷಿಸಿದರು.
ಗ್ರಾ.ಪಂ. ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ಪಿ.ಡಿ.ಅಂತೋಣಿ, ಬಿದ್ದಪ್ಪ, ಗಿರೀಶ್, ಸೋಮಣ್ಣ, ನಿರೂಪಾ, ಗೋಪಿ ಬೀಮಯ್ಯ, ಸುರೇಶ ಬಾವೆ, ಜೆರ್ಮಿ, ದಮಯಂತಿ, ಕೆ.ಎ.ಲತೀಫ್, ಶೀಲಾ ಗ್ರಾ.ಪಂ. ಲೆಕ್ಕಾಧಿಕಾರಿ ಅನಿತಾ ಸಿಬ್ಬಂದಿ ಇದ್ದರು.