ಧರ್ಮಾಪುರ ತಾಲೂಕಿನ ರತ್ನಪುರಿ(ದರ್ಗ) ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಪಿ.ಮಂಜುನಾಥ್ ಚಾಲನೆ ನೀಡಿದರು. ಗದ್ದಿಗೆ ದೇವರಾಜ್, ಆಜ್ಗರ್‌ಪಾಷ, ಹುಂಡಿಮಾಳ ಸುರೇಶ್ ಇತರರು ಇದ್ದರು. 
ಜಿಲ್ಲೆ

ಮಾದರಿ ಕ್ಷೇತ್ರವನ್ನಾಗಿಸಲು ಶ್ರಮ

ಧರ್ಮಾಪುರ: ಕಳೆದ 15 ವರ್ಷಗಳಿಂದ ತಾಲೂಕನ್ನು ಮಾದರಿ ಕ್ಷೇತ್ರವನ್ನಾಗಿಸಲು ಶ್ರಮಿಸಿದ್ದೇನೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಹೇಳಿದರು.

ರತ್ನಪುರಿ(ದರ್ಗ) ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 90 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು. ನೀರಾವರಿ, ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಜತೆಗೆ ಸಮಗ್ರ ಅಭಿವೃದ್ಧಿ, ಕುಡಿಯುವ ನೀರು, ಶಿಕ್ಷಣ ಕ್ಷೇತ್ರ, ಆಸ್ಪತ್ರೆ ಸೇರಿದಂತೆ ತಾಲೂಕನ್ನೂ ಮಾದರಿಯಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ರಾಜ್ಯದಲ್ಲಿಯೇ ಹೆಚ್ಚು ಸಾಗುವಳಿ ನೀಡಿದ ತೃಪ್ತಿ ನನಗೆ ಇದೆ ಎಂದರು.

ಕಾಗ್ರೆಸ್ ಈಗಾಗಲೇ ಗೃಹಲಕ್ಷ್ಮೀ, ಗೃಹಜ್ಯೋತಿ, 10 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಣೆ ಜತೆಗೆ ವಸತಿ ನಿರ್ಮಾಣಕ್ಕೆ 4 ಲಕ್ಷ ರೂ. ಅನುದಾನ ನೀಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿ ಘೋಷಣೆ ಮಾಡಿದೆ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗಳನ್ನು ಮನೆ ಮನೆಗೆ ತಲುಪಿಸಿ ಪಕ್ಷದ ಘೋಷಣೆಗಳನ್ನು ಜನರಿಗೆ ಕಾರ್ಯಕರ್ತರು ತಿಳಿಸಬೇಕು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಟ್ಟಿದ್ದ 165 ಭರವಸೆಗಳನ್ನು ಈಡೇರಿಸಲಾಗಿತ್ತು. ಆದ್ದರಿಂದ ಈ ಬಾರಿ ಜನರಿಗೆ ಕಾಂಗ್ರೆಸ್ ಮೇಲೆ ನಂಬಿಕೆ ಬಂದಿದ್ದು, ರಾಜ್ಯದ ಎಲ್ಲೆಡೆ ಪಕ್ಷದ ಪರ ಅಲೆಯಿದೆ ಎಂದರು.

ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯರಾದ ಗದ್ದಿಗೆ ದೇವರಾಜ್, ಆಜ್ಗರ್‌ಪಾಷ, ಹುಂಡಿಮಾಳ ಸುರೇಶ್, ಪಕ್ಷದ ತಾಲೂಕು ಕಾರ್ಯಧ್ಯಕ್ಷ ಪುಟ್ಟರಾಜು, ಗ್ರಾಪಂ ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಶಾಂತಿ, ಪದ್ಮಾ ನಾರಾಯಣಗೌಡ, ರತ್ನಮ್ಮ, ಗೋವಿಂದಶೆಟ್ಟಿ, ಮನುಕುಮಾರ್, ಆಲ್ತಾಫ್‌ಷರೀಪ್, ರಫೀಕ್, ಮೇಗಾಣಿ ಬಾಬು, ಜಿಪಂ ಮಾಜಿ ಸದಸ್ಯೆ ಶಿವಗಾಮಿ, ಮುಖಂಡರಾದ ಶಿವಣ್ಣ, ಕೃಷ್ಣ, ನಾಡಪ್ಪನಹಳ್ಳಿ ರಾಜು, ಮಹಮದ್, ಮಹೇಶ್, ಮಹದೇವಸ್ವಾಮಿ ಇತರರು ಇದ್ದರು.