ಜಿಲ್ಲೆ

ಮಾದರಿ ಕಾರ್ಯವೇ ರೋಟರಿ ಆಶಯ

ವಿಜಯವಾಣಿ ಸುದ್ದಿಜಾಲ ಧಾರವಾಡ
ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಹಲವು ಸಮಾಜಮುಖಿ ಕಾರ್ಯ ಮಾಡುತ್ತಿದೆ. ಇತರರ ಒಳಿತಿಗೆ ಬದುಕುವುದೇ ಜೀವನ ಕಲೆ. ಇದನ್ನು ರೋಟರಿ ಕ್ಲಬ್‌ನ ಸದಸ್ಯರು ಸಮರ್ಪಕವಾಗಿ ಅಳವಡಿಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗುವಂತೆ ಕಾರ್ಯ ಮಾಡುವುದೇ ಕ್ಲಬ್‌ನ ಆಶಯ ಎಂದು ಧಾರವಾಡ ಸೆಂಟ್ರಲ್ ರೋಟರಿ ಕ್ಲಬ್ ಅಧ್ಯಕ್ಷ ಸುನೀಲ ಬಾಗೇವಾಡಿ ಅಭಿಪ್ರಾಯಪಟ್ಟರು.
ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ವತಿಯಿಂದ ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‌ ಭವನದಲ್ಲಿ ವಿಶ್ವ ಪತ್ರಿಕಾ ದಿನ, ಚಾರ್ಟರ್ಡ್ ಅಕೌಂಟೆಂಟ್ ದಿನ ಮತ್ತು ವೈದ್ಯ ದಿನ ನಿಮಿತ್ತ ಶನಿವಾರ ಏರ್ಪಡಿಸಿದ್ದ ವೃತ್ತಿಪರ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವೈದ್ಯ ಡಾ ವಿವೇಕಾನಂದ ಗಜಪತಿ, ಸಿಎ ಗುರುಬಸವ ತುಂಬರಗುದ್ದಿ, ರೈತ ಸಾಧಕ ಶಿವಶಂಕ್ರಯ್ಯ ಹಿರೇಮಠ, ಪತ್ರಕರ್ತರಾದ ನಿಜಗುಣಿ ದಿಂಡಲಕೊಪ್ಪ, ವಿಕ್ರಮ ನಾಡಿಗೇರ, ವಿಶ್ವನಾಥ ಕೋಟಿ ಮತ್ತು ಮಹಾಂತೇಶ ಕಣವಿ ಅವರಿಗೆ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೇವಾ ಪ್ರಶಸ್ತಿ ಸ್ವೀಕರಿಸಿದ ವಿಶ್ವನಾಥ ಕೋಟಿ ಮಾತನಾಡಿ, ರೋಟರಿ ಸಂಸ್ಥೆ ಬೆಳೆದಿದ್ದೇ ಸಮಾಜಮುಖಿ ಕಾರ್ಯಕ್ಕೆ. ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆ ದೊಡ್ಡ ಪಾತ್ರ ನಿರ್ವಹಿಸಿದೆ. ಇಂತಹ ಸಂಸ್ಥೆ ವತಿಯಿಂದ ಗೌರವ ಸ್ವೀಕರಿಸಿದ್ದು ಹೆಮ್ಮೆಯ ಸಂಗತಿ ಎಂದರು.
ವೃತ್ತಿಪರ ಸೇವಾ ನಿರ್ದೇಶಕ ಗುಲಷನ್ ಸಿಂಗ್, ಕಾರ್ಯದರ್ಶಿ ಶರಯು ನಾಯಕ, ಕೋಶಾಧ್ಯಕ್ಷ ಮಾಹಾಂತೇಶ ಗುಂಜೆಟ್ಟಿ, ಪ್ರೊ. ವಾಸುದೇವ ಪರ್ವತಿ, ಡಾ. ಸತೀಶ ಇರಕಲ್ಲ, ಡಾ. ಎಸ್.ಬಿ. ಹುಕ್ಕೇರಿ, ಪ್ರಕಾಶ ಏರಿ, ಸೂರಜ ಕುಲಕರ್ಣಿ, ರಾಮು ದೊಡ್ಡಮನಿ, ಕರಣ ದೊಡ್ಡವಾಡ, ಗಿರೀಶ ಬೆಟಗೇರಿ, ವಾಮನ ಮಂತ್ರಿ, ಚಿನ್ನಶ್ರೀ ಬೆಳ್ಳಕ್ಕಿ, ಡಾ. ಕವನ ದೇಶಪಾಂಡೆ, ಪವನ ಬೆಟಗೇರಿ, ಅರುಣ ಶೀಲವಂತ, ಸಂಜಯ್ ಲೋಂಡೆ, ರಮೇಶ ಬಣಕಾರ, ಮಾರ್ತಾಂಡಪ್ಪ ಕತ್ತಿ, ಇತರರು ಇದ್ದರು.
ಸಚಿನ್ ನಿಂಗನೂರು ನಿರೂಪಿಸಿದರು. ಶರಯು ನಾಯಕ ವಂದಿಸಿದರು.