ಜಿಲ್ಲೆ

ಮಾದಕ ವಸ್ತುಗಳಿಂದ ಸ್ವಾಸ್ಥ್ಯ ಹಾಳು

ರಾಯಬಾಗ: ಮಾದಕ ಪದಾರ್ಥ ಸೇವನೆಯಿಂದ ಯುವಕರು ದಾರಿ ತಪ್ಪುತ್ತಿರುವುದರಿಂದ ಸಾಮಾಜದ ಸ್ವಾಸ್ಥ್ಯಹದಗೆಡುತ್ತಿದೆ ಎಂದು ಪಿಎಸ್‌ಐ ನರಸಿಂಹರಾಜು ಹೇಳಿದರು.

ತಾಲೂಕಿನ ನಸಲಾಪುರ ಗ್ರಾಮದ ಗುಂಡಪ್ಪ ಕಾಂತೆ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಜನಾಂಗ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿರುವುದರಿಂದ ಅಪರಾಧ ಗಳ ಸಂಖ್ಯೆ ಹೆಚ್ಚುತ್ತಿವೆ. ಪಾಲಕರು ತಮ್ಮ ಮಕ್ಕಳ ಕಡೆಗೆ ಹೆಚ್ಚಿನ ಗಮನ ಹರಿಸಿ ದಾರಿ ತಪ್ಪದಂತೆ ನೋಡಿಕೊಳ್ಳಬೇಕು. ಶಿಕ್ಷಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರ ನೀಡಬೇಕು ಎಂದರು.

ತಾಲೂಕು ಯೋಜನಾಧಿಕಾರಿ ಮಹೇಶ್ವರಪ್ಪ ಜಿ. ಪ್ರಾಸ್ತಾವಿಕ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಎಸ್.ಕೆ.ಮಾಲಗಾಂವೆ ಅವರು ಮಾದಕ ವಸ್ತು ಸೇವನೆಯಿಂದ ಆಗುವ ದುಷ್ಪರಿಣಾಮ ಕುರಿತು ಮಾಹಿತಿ ನೀಡಿದರು.

ಮುಖ್ಯ ಶಿಕ್ಷಕ ಆರ್.ಡಿ.ಪಾಟೀಲ, ಜನಜಾಗೃತಿ ವೇದಿಕೆ ಸದಸ್ಯ ಜಿನೇಂದ್ರ ಖೆಮಲಾಪುರೆ, ವಲಯ ಮೇಲ್ವಿಚಾರಕಿ ಮಂಜುಳಾ ಚಂದ್ರಶೇಖರ, ಕೃಷಿ ಮೇಲ್ವಿಚಾರಕ ಗೋಪಾಲ ಕುಂಬಾರ, ಸೇವಾ ಪ್ರತಿನಿಧಿ ಜಯಶ ಇತರರಿದ್ದರು.