ಜಿಲ್ಲೆ

ಮಾದಕ ವಸ್ತುಗಳ ದುಷ್ಪರಿಣಾಮ ಜಾಗೃತಿ ಅವಶ್ಯ

ಚಿಕ್ಕೋಡಿ: ಮಾದಕ ವಸ್ತುಗಳ ಸೇವನೆಯಿಂದ ಯುವಜನರು ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಡಿವೈಎಸ್‌ಪಿ ಗೋಪಾಲಕೃಷ್ಣ ಗೌಡರ ಹೇಳಿದರು.

ಇಲ್ಲಿನ ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ಸೇವನೆ ಮತ್ತು ಕಳ್ಳ ಸಾಗಣೆ ವಿರೋಧಿ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಇವುಗಳ ಸೇವನೆ, ಸಾಗಣೆ, ಮಾರಾಟ ಅಪರಾಧವಾಗಿದೆ. ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದರು.

ಪಿಎಸ್‌ಐ ಬಸ್‌ಗೌಡ ನೇರ್ಲಿ ಮಾತನಾಡಿ, ಮಾದಕ ವಸ್ತು ಸೇವನೆಗೆ ದಾಸರಾಗುತ್ತಿರುವುದು ವಿಷಾದನೀಯ ಎಂದರು. ಡಾ. ಕನಕಾಚಲ ಕನಕಗಿರಿ ಮಾತನಾಡಿದರು.

ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಾದ ಪೂಜಾ ಜರ್ಲಿ, ಆಕಾಶ ಕೊಜಾಪುರ್, ಮಲ್ಕಾರಿ ಮಸರಗುಪ್ಪಿ, ಅಕ್ಷತಾ ಶೇಕ್ದಾರ್, ರಂಜಿತ್ ಕೋಕಟೆಗೆ ಬಹುಮಾನ ವಿತರಿಸಲಾಯಿತು.

ಪ್ರಶಿಕ್ಷಣಾರ್ಥಿ ಶ್ರುತಿ ಬತ್ತೆ ಮಾತನಾಡಿದರು.

ಡಾ.ಎನ್.ಎಸ್.ಶಿಂಧೆ, ಸುಜಾತ ಚಂದ್ಗಡೆ, ಎಂ.ಎಚ್.ರಾವುತ, ಪ್ರಶಾಂತ ಪತ್ತಾರ. ಕೃಷ್ಣ ಅರಗೆ, ಕಾಡಪ್ಪ ಬಲೋರಮಠ, ಕವಿತಾ ಹರಕೆ, ಆಸ್ಮಾ ಜಮಾದಾರ್, ಉಜ್ವಲ ಮಾನೆ, ಅನುಸೂಯಾ ಖಾನಾಪುರಿ, ಅನಿತಾ ಪೋದಾರ, ಸುಚಿತ್ರಾ ಚೌಗಲಾ, ಅನಿಲ ದಣವಾಡೆ ಇತರರು ಇದ್ದರು.