ಅರಕಲಗೂಡು: ರೈತರು ದಿನದಿಂದ ದಿನಕ್ಕೆ ಅವನತಿಯತ್ತ ಸಾಗುತ್ತಿದ್ದು ಕುಡಿತ, ಮಾದಕ ವಸ್ತು ಸೇವನೆ ಹಾಗೂ ದುಂದುವೆಚ್ಚದಿಂದ ದೂರವುಳಿದರೆ ನೆಮ್ಮದಿಯಿಂದ ಬದುಕಬಹುದು ಎಂದು ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಶೀಬಹಳ್ಳಿ ಗ್ರಾಮದಲ್ಲಿ ಕೃಷಿ, ತೋಟಗರಿಕ ಇಲಾಖೆ, ಕಂದಾಯ, ಪಶು ಸಂಗೋಪನ ಇಲಾಖೆ, ವಿವಿಧ ಸಂಘ ಸಂಸ್ಥೆಗಳು ಹಾಗೂ ತಾಲೂಕು ರೈತ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೃಷಿಕರು ಸ್ಮಜ್ಞಾನಿಗಳಾದರಷ್ಟೆ ಹಳ್ಳಿಯಲ್ಲಿ ಒಚಿದೆರಡು ಎಕರೆ ಜಮೀನಿದ್ದರೂ ರಾಜನಂತೆ ಬದುಕಬಹುದು. ದುರಾದೃಷ್ಟವಶಾತ್ ನೆಮ್ಮದಿಬಿಟ್ಟು ಕೆಡಿಸಿಕೊಳ್ಳಲು ಏನುಬೇಕೋ ಅದನ್ನೆಲ್ಲಾ ದುರಭ್ಯಾಸದ ಚಟಕ್ಕೆ ಅಂಟಿಕೊಂಡಿರುವುದು ನೆಮ್ಮದಿ ಬದುಕಿಗೆ ಮಾರಕವಾಗುತ್ತಿದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಬದುಕಿನಲ್ಲಿ ಉತ್ತಮ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ದೇಶದಲ್ಲಿ 10 ಮಂದಿ ಹೆಣ್ಣುಮಕ್ಕಳಲ್ಲಿ ನಾಲ್ವರಿಗೆ ಥೈರಾಯಿಡ್ ಕಾಯಿಲೆ ಬರುತ್ತಿದೆ. ಕಾರಣ ಹಿಂದೆ ಹೆಣ್ಣುಮಕ್ಕಳು ನೀರನ್ನು ತರಲು ಕಿಲೋಮೀಟರ್ ದೂರದಿಂದ ನೀರನ್ನು ಹೊತ್ತು ತರುತ್ತಿದ್ದರು. ಈಗ ಯಾರು ಹೊರುತ್ತಿಲ್ಲ. ಜತೆಗೆ ಔ?ಧಿ ಸಿಂಪಡಿಸಿದ ಆಹಾರ ಸೇವಿಸಲಾಗುತ್ತಿದೆ. ಇದರಿಂದ ಅನಾರೋಗ್ಯ, ಗರ್ಭಕೋಶದ ಸಮಸ್ಯೆ ಕಾಡುತ್ತಿದೆ. ಮನು?್ಯ ಕಾಯಿಲೆಗಳ ಕಷ್ಟ ಕೋಟಲೆಗಳಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ವಿಷಾದಿಸಿದರು.
ಹಿಂದಿನ ಕಾಲದಲ್ಲಿ ಮನೆಯಲ್ಲಿ ಹೆಂಗಸರಿಗೆ ಜ್ವರ ಬಂದರೆ ಅಕ್ಕಪಕ್ಕದ ಮನೆಯವರು ಹೋಗಿ ಅರೋಗ್ಯ ವಿಚಾರಿಸಿ, ಅಡುಗೆ ಮಾಡಿಕೊಟ್ಟು ಕ?್ಟ ಸುಖದಲ್ಲಿ ಭಾಗಿಯಾಗುತ್ತಿದ್ದರು. ಆದರೆ, ಇಂದು ಇವೆಲ್ಲ ಮಾಯವಾಗಿವೆ. ಅಣ್ಣ ತಮ್ಮಂದಿರ ನಡುವೆ ಆಸ್ತಿ ವಿ?ಯಕ್ಕೆ ಹೊಡೆದಾಟವಾಗುತ್ತಿವೆ. ಬೇರೆಯವರ ಅನುಕರಣೆ ಹೆಚ್ಚಾಗಿದೆ. ಬೇರೊಬ್ಬರ ತಾರಸಿ ಮನೆ ಕಟ್ಟಿದರೆ ನಾನು ಕಟ್ಟಬೇಕು. ಅದ್ದೂರಿಯಾಗಿ ಮದುವೆ ಮಾಡಿದರೆ ತಾವು ಮಾಡಬೇಕೆಂಬ ಅನುಕರಣೆ ಬಂದಿದ್ದು, ಸಾಲ ಮಾಡಿ ಮದುವೆ ಮಾಡುತ್ತಿದ್ದಾರೆ. ಇದರಿಂದ ಸಾಲ ತೀರಿಸಲಾಗದೆ, ನೆಮ್ಮದಿ ಸಹ ಇಲ್ಲದೆ ಪರದಾಡುತ್ತಿದ್ದಾನೆ. ನನ್ನಮ್ಮ ಹಳ್ಳಿಯಲ್ಲಿ ತಿಂಗಳಿಗೆ 2 ಸಾವಿರದಲ್ಲಿ ಮನೆ ನಡೆಸುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿ ಮನೆಯಲ್ಲಿ ಒಬ್ಬ ವ್ಯಕ್ತಿ ಕುಡಿಯಲು ದಿನಕ್ಕೆ 300 ರೂ ವ್ಯಯಿಸುತ್ತಿದ್ದು ತಿಂಗಳಿಗೆ 9 ಸಾವಿರ ಖರ್ಚು ಮಾಡುತ್ತಾನೆ. ಕುಡಿತದ ಚಟಕ್ಕೆ ಒಳಗಾಗಿ ಮಕ್ಕಳು, ಹೆಂಡತಿಯೊಂದಿಗೂ ಮಾತನಾಡಲು ಸಮಯ ಇರಲ್ಲ. ಇದರಿಂದ ಮನು?್ಯ ಮನು?್ಯನ ನಡುವೆ ಪ್ರೀತಿ ಕಡಿಮೆಯಾಗುತ್ತಿದೆ ಎಂದರು.
ಒತ್ತಡದಲ್ಲಿ ಬದುಕಿದವರು, ಮೋಸ ಮಾಡಿ ಹಣ ಸಂಪಾದಿಸಿದವರು ಯಾರು ಅರೋಗ್ಯವಾಗಿಲ್ಲ. ಒಂದಲ್ಲಾ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ. ನೆಮ್ಮದಿಯಿಂದ ಬದುಕುತ್ತಿರುವವರು ರೈತರು ಮಾತ್ರ. ನಾವು ಬಡವರೆಂದು ಅಂದುಕೊಳ್ಳಬೇಕಿಲ್ಲ. ನಾವೆಲ್ಲ ಒಗ್ಗಟ್ಟಾಗಿ ಸಂಘಟಿತರಾದರೆ ಇನ್ನು ಹೆಚ್ಚು ನೆಮ್ಮದಿಯಾಗಿ ಬದುಕಬಹುದು ಹೇಳಿದರು.
ಇದಕ್ಕೂ ಮೊದಲು ವೀರಗಾಸೆ ನೃತ್ಯದೊಂದಿಗೆ ಗ್ರಾಮದ ಮಹಿಳೆಯರು ಕಳಸವನ್ನು ಹೊತ್ತು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಸಾಗಿದರು. ಬಳಿಕ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ, ರಾಸುಗಳ ಪ್ರದರ್ಶನದಲ್ಲಿ ಉತ್ತಮ ರಾಸು, ರಂಗೋಲಿ ಸ್ಪರ್ಧೆಗಳಿಗೆ ಬಹುಮಾನ ವಿತರಿಸಲಾಯಿತು.
ಬೆಳವಾಡಿ ಗ್ರಾಪಂ ಅಧ್ಯಕ್ಷೆ ಯೋಗಮಣಿ ಕಾರ್ಯಕ್ರಮ ಉದ್ಘಾಟಿಸಿದರು. ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ನಿಂಗೇಗೌಡ, ಕರ್ನಾಟಕ ಗ್ರಾಮೀಣ ಬ್ಯಾಕ್ ಹಾಸನ ವಲಯ ವ್ಯವಸ್ಥಾಪಕ ಪಾರ್ಥಲಿಂಗಯ್ಯ, ಇಪ್ಕೋ ಜಿಲ್ಲಾ ಮಾರಾಟ ವ್ಯವಸ್ಥಾಪಕ ವಿನಯ್ ಕುಮಾರ್, ತಾಲೂಕು ರೈತ ಸಂಘದ ಅಧ್ಯಕ್ಷ ಎಸ್. ವಿ. ಯೋಗಣ್ಣ, ಬೆಳವಾಡಿ ಗ್ರಾಪಂ ಪಿಡಿಒ ಸಂತೋ?್, ರೈತ ಮಹಿಳೆ ಕಮಲಮ್ಮ, ಹೇಮಲತಾ ಮತ್ತಿತರಿದ್ದರು.