ಜಿಲ್ಲೆ

ಮಾದಕ ವಸ್ತು ವ್ಯಸನ ವಿರುದ್ಧ ಜಾಗೃತಿ ಜಾಥಾ

ಚಿತ್ರದುರ್ಗ: ನಶೆ ಮುಕ್ತ ಚಿತ್ರದುರ್ಗ ಜಿಲ್ಲೆ ಅಭಿಯಾನದ ಅಂಗವಾಗಿ ಪೊಲೀಸ್ ಇಲಾಖೆ ಸೋಮವಾರ ನಗರದ ಕನಕ ವೃತ್ತದಿಂದ ವೀರವನಿತೆ ಒನಕೆ ಓಬವ್ವ ವೃತ್ತದವರೆಗೆ ಮದ್ಯ,ಮಾದಕ ವಸ್ತುಗಳ ವ್ಯಸನ ವಿರುದ್ಧ ಜಾಗೃತಿ ಜಾಥಾವನ್ನು ಆಯೋಜಿಸಲಾಗಿತ್ತು.
ಎಸ್‌ಪಿ ಧರ್ಮೆಂದರ್‌ಕುಮಾರ್‌ಮೀನಾ ಜಾಥಾಕ್ಕೆ ಚಾಲನೆ ನೀಡಿದರು. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು,ನಾಗರಿಕರು ಭಾಗ ವಹಿಸಿದ್ದ ಜಾಥಾ ನಗರದ ಪ್ರಮು ಖ ರಸ್ತೆಗಳಲ್ಲಿ ಸಾಗಿ ಮದಕರಿ ನಾಯಕರ ವೃತ್ತದಲ್ಲಿ ಮಾನವ ಸರಪಳಿ ರಚಿಸಿತು. ಬಳಿಕ ಒನಕೆ ಓಬವ್ವ ವೃ ತ್ತದಲ್ಲಿ ನಡೆದ ವೇದಿಕೆ ಕಾರ‌್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರು ಮಾತನಾಡಿ,ಮನಸನ್ನು ಹತೋಟಿಯಲ್ಲಿ ಇಟ್ಟು ಕೊಂಡರೆ ಮಾದಕ ವಸ್ತುಗಳ ಬಳಕೆಯಿಂದ ದೂರವುಳಿಯಬಹುದೆಂದರು.
ಎಸ್‌ಪಿ ಧರ್ಮೇಂದರ್‌ಕುಮಾರ್‌ಮೀನಾ ಮಾತನಾಡಿ, ಮಾದಕ ವಸ್ತು ಸೇವನೆ, ಸಂಗ್ರಹ,ಮಾರಾಟಕ್ಕೆ ಕಠಿಣ ಶಿಕ್ಷೆ ಇದೆ. ಮಾದಕ ವಸ್ತುಗಳ ಮಾರಾಟದ ಕುರಿತಂತೆ ನಾಗರಿಕರು ಮಾಹಿತಿ ನೀಡುವ ಮೂಲಕ ಮಾದಕ ವಸ್ತುಗಳ ಮಾರಾಟ ಜಾಲವನ್ನು ಭೇದಿಸಲು ಇಲಾಖೆ ಗೆ ಸಹಕಾರ ನೀಡಬೇಕೆಂದು ಕೋರಿದರು.
ಎಎಸ್‌ಪಿಗಳಾದ ಕುಮಾರಸ್ವಾಮಿ,ಅಬ್ದುಲ್‌ಖಾದರ್, ಡಿವೈಎಸ್‌ಪಿ ಅನಿಲ್‌ಕುಮಾರ್,ಬಾಲಕಿಯರ ಸರ್ಕಾರಿ ಪಪೂ ಕಾಲೇಜು ಪ್ರಾ ಚಾರ‌್ಯರು,ಪ್ರಾ ಧ್ಯಾಪಕರು,ಇತರ ಪೊಲೀಸ್ ಅಧಿಕಾರಿಗಳು ಇದ್ದರು.