ಜಿಲ್ಲೆ

ಮಾದಕ ವಸ್ತು ಮಾರುತ್ತಿದ್ದ ಯುವಕನ ಬಂಧನ

ಮೈಸೂರು: ನಿಷೇಧಿತ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನನ್ನು ನರಸಿಂಹರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ

ರಾಜೇಂದ್ರ ನಗರದ ಸೈಯದ್ ಸಾಖಿಬ್ ಬಂಧಿತ ಆರೋಪಿ.

ನಗರದ ಬೆಂಗಳೂರು-ಮೈಸೂರು ಹೆದ್ದಾರಿ ಬಳಿ ನಂಬರ್ ಪ್ಲೇಟ್ ಇಲ್ಲದೆ ಬೈಕ್ ನಿಲ್ಲಿಸಿಕೊಂಡು ಆರೋಪಿ ಅನುವಾನಸ್ಪದವಾಗಿ ವರ್ತಿಸುತ್ತಿದ್ದ. ಗಸ್ತಿನಲ್ಲಿದ್ದ ಪೊಲೀಸರು ಆತನನ್ನು ಸುತ್ತುವರಿದು ಹಿಡಿದಿದ್ದಾರೆ.

ಆತನನ್ನು ತಪಾಸಣೆ ಮಾಡಿದಾಗ ಲಕ್ಷಾಂತರ ರೂ. ಮೌಲ್ಯದ ವಾದಕ ವಸ್ತು ಪತ್ತೆಯಾಗಿದೆ.

ಎನ್‌ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.