ಚಿಕ್ಕಮಗಳೂರು: ಮಾದಕ ದ್ರವ್ಯಗಳ ಬಗ್ಗೆ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು. ಗಾಂಜಾ, ಅಫೀಮುಗಳ ಉತ್ಪಾದನೆ, ಸಂಗ್ರಹ ಅಥವಾ ಮಾರಾಟಗಳು ಕಂಡುಬAದಲ್ಲಿ ಶೀಘ್ರವೇ ಪೋಲೀಸರನ್ನು ಸಂಪರ್ಕಿಸಿ ಎಂದು ಸೈಬರ್ ಆರ್ಥಿಕ, ಮಾದಕ ವಸ್ತು ಅಪರಾಧ ವಿಭಾಗದ ಡಿವೈಎಸ್ಪಿ ತಿಪ್ಪೇಸ್ವಾಮಿ ತಿಳಿಸಿದರು.
ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಿದ್ಧ ಮಾದಕ ದ್ರವ್ಯಗಳ ನಿಯಂತ್ರಣ ಮತ್ತು ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳಿಗೆ ದಾಸರಾಗದೇ ಸಂಯಮ, ಆತ್ಮಶಕ್ತಿ ಹಾಗೂ ಸ್ವಬಲವನ್ನು ಅಳವಡಿಸಿಕೊಳ್ಳಬೇಕು ಎಂದರು.
ಭವಿಷ್ಯದ ಪ್ರಜೆಗಳನ್ನು ನೆಲಸಮಗೊಳಿಸುವ ನಿಟ್ಟಿನಲ್ಲಿ ಕೆಲವು ಕಿಡಿಕೇಡಿಗಳು ಮಾದಕ ವಸ್ತುಗಳ ಮಾರಾಟ, ಸಾಗಾಣಿಕೆ ಚಟುವಟಿಕೆಗಳನ್ನು ಶಾಲಾ-ಕಾಲೇಜು ಅಥವಾ ಇನ್ನಿತರ ಪ್ರದೇಶಗಳಲ್ಲಿ ಮಾಡುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಬದುಕು ಹಾಳಾಗಿಸುವ ದುಶ್ಚಟಗಳಿಗೆ ಬಲಿಯಾಗದೇ ಗಟ್ಟಿತನದಿಂದ ಇರಬೇಕು ಎಂದು ಕರೆ ನೀಡಿದರು.
ನಶೆ ಪದಾರ್ಥಗಳು ಯುವಪೀಳಿಗೆಯನ್ನು ಹೆಚ್ಚಾಗಿ ಆವರಿಸುತ್ತಿವೆ. ಕ್ಷಣಿಕ ಸುಖ ಅನಾರೋಗ್ಯದ ಸಂಕಷ್ಟ ಹಾಗೂ ಅಂಗಾAಗಳ ವೈಫಲ್ಯತೆಗಳಿಗೆ ಕಾರಣವಾಗಲಿದೆ. ಸ್ವಬುದ್ದಿಯಿಂದ ಯುವಕರು ಮುಂದುವರಿದರೆ ಕೆಟ್ಟ ಅಭ್ಯಾಸಗಳಿಂದ ದೂರವಿರಬಹುದು. ಜೊತೆಗೆ ಈ ಚಟುವಟಿಕೆಗಳ ಮಾಹಿತಿ ನೀಡಿದರೆ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿದಂತಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಎಐಟಿ ಕಾಲೇಜು ಪ್ರಾಚಾರ್ಯ ಡಾ.ಸಿ.ಟಿ.ಜಯದೇವ ಮಾತನಾಡಿ, ಓದುವ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಮಹತ್ವ ವನ್ನು ವಿದ್ಯಾಭ್ಯಾಸಕ್ಕೆ ಮುಡುಪಿಡಬೇಕು. ಉತ್ತಮ ಗೆಳೆಯರ ಸಹವಾಸದಿಂದ ಸಜ್ಜನ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಹಾಗಾಗಿ ಸಮಾಜದ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಯಾವುದೇ ಅನಗತ್ಯ ಚಟಗಳಿಗೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು.
ಎಐಟಿ ಕಾಲೇಜು ಮೆಕ್ಯಾನಿಕಲ್ ಇಂಜನಿಯರ್ ವಿಭಾಗದ ಸಂಯೋಜಕ ಜಿ.ಎಂ.ಸತ್ಯನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ಮುಂದೆ ಯಾವುದೇ ಚಟಗಳಿಗೆ ಬಲಿಯಾಗÀಬಾರದೆಂಬ ದೃಷ್ಟಿಯಿಂದ ವಿಶೇಷ ಪರಿಣಿತರು, ಅಧಿಕಾರಿಗಳನ್ನು ಕರೆಸಿ ಕಾರ್ಯಾಗಾರ ಹಮ್ಮಿಕೊಂಡಿz್ದೆÃವೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ನಾಡಿನ ಸತ್ಪçಜೆಗಳಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶ್ವಥ್‌ಬಾಬು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮನೋವೈದ್ಯ ಡಾ. ವಿನಯ್ ಮತ್ತಿತರರಿದ್ದರು.