ಬಾಳೆಹೊನ್ನೂರು: ಎಲ್ಲರೂ ಮಾತೃಭಾಷೆಯನ್ನು ಪೂಜಿಸಿ ಅನ್ಯಭಾಷೆಯನ್ನು ಪ್ರೀತಿಸಬೇಕು ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷ ಭಟ್ ಹೇಳಿದರು.
ಸಿಆರ್‌ಎಸ್ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದಲ್ಲಿ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಸಮಾಜವನ್ನು ಜಾಗೃತಿಗೊಳಿಸುವ ಸಾಹಿತ್ಯದ ಅನಿವಾರ್ಯ ಇದೆ ಎಂದು ತಿಳಿಸಿದರು.
ಜಂಟಿ ನಿರ್ದೇಶಕ ಡಾ. ಜೆ.ಎಸ್.ನಾಗರಾಜ್ ಮಾತನಾಡಿ, ಗೋಕಾಕ್ ಚಳವಳಿ ಮೂಲಕ ಕನ್ನಡ ಭಾಷೆಗೆ ಮಹತ್ವದ ಸ್ಥಾನ ದೊರೆಯಿತು ಎಂದರು.
ಸಂಶೋಧನಾ ನಿರ್ದೇಶಕ ಡಾ. ಸೆಂಥಿಲ್‌ಕುಮಾರ್ ಮಾತನಾಡಿ, ಮಾತೃಭಾಷೆ ಬೇರೆ ಇದ್ದರೂ ನಾವು ಕನ್ನಡವನ್ನು ಪ್ರೀತಿಸುತ್ತೇವೆ. ರಾಜ್ಯೋತ್ಸವ ನಮ್ಮ ಸಂಸ್ಥೆಯಲ್ಲಿ ನಡೆಸಿ ಏಕತೆ ಸಾರಿದ್ದೇವೆ ಎಂದರು.
ಕನ್ನಡ ಸಂಘದ ಪದಾಧಿಕಾರಿ ಸಿ.ರುದ್ರೇಗೌಡ, ಡಾ. ಸೋಮೇಶ್ವರ ಗೌಡ ಪಾಟೀಲ್, ಅಕ್ಷಿತಾ, ಪ್ರದೀಪ್‌ಕುಮಾರ್, ಚಂದನಾ ಇತರರಿದ್ದರು.