ಹೊನ್ನೇಕೊಡಿಗೆ ಗ್ರಾಪಂನಲ್ಲಿ ನುಡಿ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಕೆ.ಪಿ.ಮೀನಾಕ್ಷಿ ಮಾತನಾಡಿದರು. ವೀಣಾ, ಮಂಜುನಾಥ್, ಎಲ್ದೋ, ಕೆ.ಟಿ.ಶೇಷಣ್ಣಗೌಡ, ಸೋನಿ, ಅನ್ನಮ್ಮ ಇದ್ದರು. 
ಜಿಲ್ಲೆ

ಮಾತೃಭಾಷೆ ಅಭಿಮಾನ ಬೆಳೆಸಿಕೊಳ್ಳಿ

ಎನ್.ಆರ್.ಪುರ: ನಾಡಿನ ಪ್ರತಿಯೊಬ್ಬರೂ ಕನ್ನಡ ಭಾಷೆ ಮೇಲೆ ಅಭಿಮಾನ ಬೆಳೆಸಿಕೊಳ್ಳಬೇಕು. ಭಾಷೆ, ನೆಲ, ಜಲದ ಸಮಸ್ಯೆ ಎದುರಾದಾಗ ಕನ್ನಡಿಗರು ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ತಾಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷೆ ಕೆ.ಪಿ.ಮೀನಾಕ್ಷಿ ಕಾಂತರಾಜ್ ತಿಳಿಸಿದರು.

ಶನಿವಾರ ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯಲ್ಲಿ ತಾಲೂಕು ಸಿರಿಗನ್ನಡ ವೇದಿಕೆ ಆಯೋಜಿಸಿದ್ದ ನುಡಿ ನಿತ್ಯೋತ್ಸವದಲ್ಲಿ ಮಾತನಾಡಿ, ಮಹಿಳೆಯರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ಲೇಖಕ ಎಲ್ದೋ ಮಾತನಾಡಿ, ಸಮಾಜದಲ್ಲಿ ಅನ್ಯಾಯ, ಅಸಮಾನತೆ, ದೌರ್ಜನ್ಯಗಳ ವಿರುದ್ಧ ದ್ವನಿ ಎತ್ತುವುದು ನಾಗರಿಕ ಸಮಾಜದ ಕರ್ತವ್ಯ. ಅಸಹಾಯಕರಿಗೆ, ಬಡವರಿಗೆ ಸಹಾಯ ಹಸ್ತ ಚಾಚಬೇಕು. ಸುಂದರವಾದ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ. ಎಲ್ಲ ಮಹಿಳೆಯರನ್ನೂ ಗೌರವಿಸೋಣ ಎಂದು ಹೇಳಿದರು.

ಹೊನ್ನೇಕೊಡಿಗೆ ಗ್ರಾಪಂ ಅಧ್ಯಕ್ಷೆ ವೀಣಾ, ಸದಸ್ಯ ಮಂಜುನಾಥ್, ಕೆ.ಟಿ.ಶೇಷಣ್ಣಗೌಡ, ಸೋನಿ, ವಿಜಯಾ, ನೂತನ, ಪವಿತ್ರಾ, ಅನ್ನಮ್ಮ ಇದ್ದರು.