ಹುಣಸೂರು ತಾಲೂಕು ಬಿಳಿಕೆರೆಯ ಪಟ್ಟಲದಮ್ಮನ ಕೆರೆಗೆ ಮುಖ್ಯ ಇಂಜಿನಿಯರ್ ಸಿ.ಕೆ.ಮಲ್ಲಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಇ ಎಚ್.ಡಿ.ಲೋಕೇಶ್, ಎಇಇ ನರಸಿಂಹಯ್ಯ, ಎಂ.ಅರವಿಂದ್, ಪಿಡಿಒ ನಾಗರಾಜು ಇದ್ದರು.  
ಜಿಲ್ಲೆ

ಮಾತೃ ಹೃದಯದೊಂದಿಗೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಿ

ಹುಣಸೂರು: ನರೇಗಾ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಮಾತೃಹೃದಯದೊಂದಿಗೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ ಮುಖ್ಯ ಇಂಜಿನಿಯರ್ ಸಿ.ಕೆ.ಮಲ್ಲಪ್ಪ ಅಧಿಕಾರಿಗಳಿಗೆ ಸಲಹೆ ನೀಡಿದರು.

ಕೆರೆಗಳಿಗೆ ನರೇಗಾ ಯೋಜನೆ ಮೂಲಕ ಅಮೃತ ಸರೋವರ ಕೆರೆಗಳ ಯೋಜನೆಯಡಿ ತಾಲೂಕಿನ ಬಿಳಿಕೆರೆ ಗ್ರಾಮದ ಪಟ್ಟಲದಮ್ಮನ ಕೆರೆ ಮತ್ತು ಹುಸೇನ್‌ಪುರ ಗ್ರಾ.ಪಂ.ವ್ಯಾಪ್ತಿಯ ಗುರುಮಠ ಕೆರೆ ಮತ್ತು ಕೊಮ್ಮೆಗೌಡನಕೊಪ್ಪಲು ಗ್ರಾಮದ ಕೆಜಿಕೊಪ್ಪಲು ಕೆರೆಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮಂಗಳವಾರ ಪರಿಶೀಲಿಸಿ ಮಾತನಾಡಿದರು.

ನರೇಗಾ ಯೋಜನೆ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿಯ ಕ್ರಾಂತಿಯನ್ನೇ ಉಂಟು ಮಾಡುತ್ತಿದೆ. ಯೋಜನೆಯ ಸದ್ಬಳಕೆ ಕುರಿತು ಸಮಗ್ರ ಮಾಹಿತಿ ಅಧಿಕಾರಿಗಳಲ್ಲಿ ಇರಬೇಕು. ನರೇಗಾ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ತಾಯಿಯಿದ್ದಂತೆ. ಅದನ್ನು ಜಾರಿಗೊಳಿಸು ವವರೂ ತಾಯಿ ಹೃದಯದವರೇ ಆಗಿರಬೇಕು. ಯೋಜನೆಯ ಸಮರ್ಪಕ ಜಾರಿಯಿಂದ ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು, ಗ್ರಾಮಸ್ಥರ ಇತರ ಬೇಡಿಕೆಗಳನ್ನು ಪೂರೈಸಬಹುದಾಗಿದೆ. ಅಲ್ಲದೆ ಕೆರೆಗಳ ಸಮಗ್ರ ಅಭಿವೃದ್ಧಿಯೂ ಆಗಬೇಕು ಎಂದು ಸೂಚಿಸಿದರು.

ತಾ.ಪಂ.ಸಹಾಯಕ ನಿರ್ದೇಶಕ ಎಚ್.ಡಿ.ಲೋಕೇಶ್, ಪಿಆರ್‌ಡಿಒ ಎಇಇ ನರಸಿಂಹಯ್ಯ, ಹುಸೇನ್‌ಪುರ ಮತ್ತು ಬಿಳಿಕೆರೆ ಗ್ರಾ.ಪಂ.ಅಧ್ಯಕ್ಷರು, ತಾಂತ್ರಿಕ ಸಂಯೋಜಕ ಎಂ.ಅರವಿಂದ್, ಪಿಡಿಒ ನಾಗರಾಜು, ತಾಂತ್ರಿಕ ವಿಭಾಗದ ಎಇ ಜೆ.ನವೀನ್, ಎಚ್.ಸಿ.ನಟರಾಜ್, ಎಸ್.ಪವಿತ್ರಾ, ಡಿ.ಹರ್ಷಿತ, ಸಿ.ಚೈತನ್ಯ, ನಂದ ಶ್ರೀನಿವಾಸ್, ಪುಷ್ಪಾವತಿ ಹಾಗೂ ಗ್ರಾಮಸ್ಥರು ಹಾಜರಿದ್ದರು.