ಸೇಡಂ: ಅನಾರೋಗ್ಯದ ಮಧ್ಯೆಯೂ ಪೂಜ್ಯ ಮಾತೆ ಮಾಣಿಕೇಶ್ವರಿ ಅವರು ಮಹಾಶಿವರಾತ್ರಿ ನಿಮಿತ್ತ ಶುಕ್ರವಾರ ಯಾನಾಗುಂದಿ ಬೆಟ್ಟದ ಪರಿಸರದಲ್ಲಿ ಜಮಾಯಿಸಿದ ಅಸಂಖ್ಯ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದರು.
ಪ್ರತಿ ವರ್ಷದಂತೆ ಅಮ್ಮನವರು ಗುಹೆಯಿಂದ ಹೊರಬಂದು ದರ್ಶನ ನೀಡುವರು ಎಂಬ ನಂಬಿಕೆಯಿಂದ ಬೆಳೆಗ್ಗೆಯಿಂದಲೇ ಯಾನಗುಂದಿ ಬೆಟ್ಟದಲ್ಲಿ ಸಾವಿರಾರು ಭಕ್ತರು ಜಮಾಯಿಸಿದ್ದರು. ಗಂಟೆಗಟ್ಟಲೆ ಕಾದ ಬಳಿಕ ಮಧ್ಯಾಹ್ನ 2.30ಕ್ಕೆ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಸಹಾಯದಿಂದ ಗಾಲಿ ಕುರ್ಚಿ ಮೂಲಕ ಹೊರಬಂದ ಅಮ್ಮ, ಸುಮಾರು 10 ನಿಮಿಷ ಮೌನ ದರ್ಶನ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಡಾ.ಚಂದ್ರಶೇಖರ ಪಾಟೀಲ್ ಹುಮನಾಬಾದ್, ಮಾಜಿ ಶಾಸಕ ಡಾ.ಎ.ಬಿ. ಮಾಲಕರಡ್ಡಿ, ಕಲಬುರಗಿ ಕೇಂದ್ರೀಯ ವಿವಿ ಕುಲಪತಿ ಮಹೇಶ್ವರಯ್ಯ, ವಿಜಯಪುರ ಜಿಪಂ ಸಿಇಒ ಗೋವಿಂದರೆಡ್ಡಿ, ಪ್ರಮುಖರಾದ ಪರ್ವತರೆಡ್ಡಿ ಪಾಟೀಲ್ ನಾಮವಾರ, ಸಿದ್ರಾಮಪ್ಪ ಸಣ್ಣೂರ, ಶರಣಪ್ಪ ತಳವಾರ, ಮೌಲಾಲಿ ಅನಪುರ, ಭೀಮರಾಯ ಹಣಮನಹಳ್ಳಿ, ಅವಧೂತ ಅಫಜಲಪುರ, ಅಮೀನಾಬೇಗಂ, ರುದ್ರು ಪಿಲ್ಲಿ, ಶರಣಪ್ಪ ಎಳ್ಳಿ, ಮಹಾದೇವ ಗೋಣಿ, ಕಿಷ್ಠಪ್ಪ ಮಾಸ್ತರ್, ಶರಣಪ್ಪ ಎಳ್ಳಿ, ಉದಯಶೆಟ್ಟಿ ಉಪಸ್ಥಿತರಿದ್ದರು.
ಡಿವೈಎಸ್ಪಿ ಈ.ಎಸ್. ವೀರಭದ್ರಯ್ಯ ನೇತೃತ್ವದಲ್ಲಿ ಸಿಪಿಐಗಳಾದ ಶಂಕರಗೌಡ ಪಾಟೀಲ್, ತಮ್ಮರಾಯ ಪಾಟೀಲ್, ಪಿಎಸ್ಐ ಸುಶೀಲಕುಮಾರ ಬಂದೋಬಸ್ತ್ ಕೈಗೊಂಡಿದ್ದರು.