ಮಾನ್ವಿ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ಭಾರತ ಕಮ್ಯೂನಿಸ್ಟ ಪಕ್ಷ ಮಾರ್ಕ್ಸ್‌ವಾದಿ ತಾಲೂಕು ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ತಾಲೂಕು ಕಾರ್ಯದರ್ಶಿ ಯಲ್ಲಪ್ಪ ಉಟಕನೂರು, ಸದಸ್ಯರಾದ ರಾಮಕೃಷ್ಣ ಕರಡಿಗುಡ್ಡ, ದುರುಗಪ್ಪ ಬೆಳವಾಟ, ಪ್ರಕಾಶ ದೋತರಬಂಡಿ, ಪ್ರಕಾಶ ತಡಕಲ್, ಅಮರಪ್ಪ ಉದ್ಬಾಳ್, ಶೇಖರಪ್ಪ ಖರಾಬದಿನ್ನಿ, ಬಸವಲಿಂಗಪ್ಪ ಉಟಕನೂರು, ಅಮರೇಶ ನಾಯಕ ಇದ್ದರು. 
ಜಿಲ್ಲೆ

ಅಧಿಕಾರಿಗಳನ್ನು ಮೂಲ ಸ್ಥಾನಗಳಿಗೆ ನಿಯೋಜನೆ ಮಾಡಿ

ಮಾನ್ವಿ: ತಾಲೂಕಿನಲ್ಲಿ ನಿಯೋಜನೆ ಆದ ಗ್ರಾಮ ಆಡಳಿತ ಅಧಿಕಾರಿಗಳನ್ನು ಬೇರೆ ಕಡೆ ವರ್ಗಾಯಿಸದಂತೆ ಭಾರತ ಕಮ್ಯೂನಿಸ್ಟ ಪಕ್ಷ ಮಾರ್ಕ್ಸ್‌ವಾದಿ ತಾಲೂಕು ಸಮಿತಿಯಿಂದ ಸೋಮವಾರ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಮನವಿ ಸಲ್ಲಿಸಲಾಯಿತು. ತಡಕಲ್ ಗ್ರಾಮದ ಗ್ರಾಮಾಡಳಿತ ಅಾಧಿಕಾರಿ ಸುಶೀಲಾ ಹಾಗೂ ಉದ್ಭಾಳ ಗ್ರಾಮದ ಗ್ರಾಮಾಡಳಿತ ಅಧಿಕಾರಿ ಮಂಜುನಾಥ ಅವರನ್ನು ಬೇರಡೆ ವರ್ಗಾಯಿಸಿದ್ದು, ಪುನಾ ಮೂಲ ಸ್ಥಾನಗಳಿಗೆ ನಿಯೋಜನೆ ಮಾಡಬೇಕು. ವರ್ಗಾವಣೆಯಿಂದ ಗ್ರಾಮಸ್ಥರು, ರೈತರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದ್ದು, ತೊಂದರೆ ಅನುಭವಿಸಬೇಕಾಗುತ್ತಿದೆ ಎಂದರು.