ಜಿಲ್ಲೆ

ಮಾಡಾಳು ಗ್ರಾಮದಲ್ಲಿ ಕಾರ್ತಿಕ ದೀಪೋತ್ಸವ

ಅರಸೀಕೆರೆ ಗ್ರಾಮಾಂತರ

ತಾಲೂಕಿನ ಕಣಕಟ್ಟೆ ಹೋಬಳಿ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಮಾಡಾಳು ಗ್ರಾಮದ ಶ್ರೀ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ಸನ್ನಿಧಾನದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನೆರವೇರಿತು.

ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಬೆಳಗಿನಿಂದಲೇ ಮೂಲ ಸನ್ನಿಧಿಯಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು. ತಳಿರು ತೋರಣ, ಬಾಳೆಕಂದು, ವಿವಿಧ ಬಗೆಯ ಹೂಗಳಿಂದ ಸಿಂಗಾರಗೊಂಡ ಸನ್ನಿಧಿಯಲ್ಲಿ ಸಂಜೆ ವೇಳೆಗೆ ಬಣ್ಣ ಬಣ್ಣದ ವಿದ್ಯುತ್ ದ್ವೀಪಗಳು ನೋಡುಗರ ಕಣ್ಮನ ಸೆಳೆದವು. ನೂರಾರು ಮಹಿಳೆಯರು ಮಣ್ಣಿನ ಹಣತೆಗೆ ಎಣ್ಣೆ, ಬತ್ತಿ ಹಾಕಿ ಸೇವೆ ಮಾಡಿದ ನಂತರ ರಾತ್ರಿ 8ಗಂಟೆ ವೇಳೆಗೆ ಧಾರ್ಮಿಕ ವಿಧಿ ವಿಧಾನಗಳಿಂದ ಪೂಜೆ ಸಲ್ಲಿಸಿದ ಅರ್ಚಕರು ದೀಪೋತ್ಸವಕ್ಕೆ ಚಾಲನೆ ನೀಡಿದರು. ನಂತರ ನೆರೆದ ಭಕ್ತರು ಹಣತೆ ದೀಪಗಳನ್ನು ಹಚ್ಚಿ ಧನ್ಯತೆ ಮೆರೆದರು. ದೇವಿಗೆ ಅರ್ಚನೆ, ಮಹಾಮಂಗಳಾರತಿ ಸಮರ್ಪಿಸಿದರು. ಭಕ್ತಾದಿಗಳಿಗೆ ಫಲಹಾರ ಹಾಗೂ ಪ್ರಸಾದ ವಿನಿಯೋಗ ನಡೆಯಿತು.