ಮೂಡಲಗಿ ತಾಲೂಕಿನ ನಾಗನೂರ ಪಟ್ಟಣದಲ್ಲಿ ಮಾಜಿ ಸೈನಿಕರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು. ಶಿವಪ್ಪ ಮಾಲಗಾರ, ಚರಂತಯ್ಯ ಮಳ್ಳಿಮಠ, ಅನಿತಾ ಮಿರ್ಜಿ ಇತರರಿದ್ದರು. 
ಜಿಲ್ಲೆ

ಮಾಜಿ ಸೈನಿಕರಿಗೆ ಸುಸಜ್ಜಿತ ಭವನ ನಿರ್ಮಾಣ

ಮೂಡಲಗಿ: ಮಾಜಿ ಸೈನಿಕರ ಕನಸಿನ ಸೈನಿಕ ಭವನವನ್ನು ನಿರ್ಮಾಣ ಮಾಡಿಕೊಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

ತಾಲೂಕಿನ ನಾಗನೂರ ಪಟ್ಟಣದಲ್ಲಿ ಬುಧವಾರ ಮಾಜಿ ಸೈನಿಕರನ್ನುದ್ದೇಶಿಸಿ ಮಾತನಾಡಿ, ಮೂಡಲಗಿಯಲ್ಲಿ ಸೈನಿಕ ಭವನ ನಿರ್ಮಾಣ ಕುರಿತು ನಿವೇಶನ ಗುರುತಿಸುವಂತೆ ಈಗಾಗಲೇ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ. ಚುನಾವಣೆಗೂ ಮುನ್ನ ನೀಡಿರುವ ಭರವಸೆಯಂತೆ ಮೂಡಲಗಿಯಲ್ಲಿ ಸುಸಜ್ಜಿತ ಸೈನಿಕ ಭವನ ನಿರ್ಮಿಸಲು ಯೋಚಿಸಲಾಗಿದೆ. ಮಾಜಿ ಸೈನಿಕರಿಗೆ ಅನುಕೂಲವಾಗುವ ಪ್ರದೇಶದಲ್ಲಿ ನಿವೇಶನ ಗುರುತಿಸಲು ಸೂಚಿಸಲಾಗಿದೆ. ಮಾಜಿ ಸೈನಿಕರು ತಮ್ಮ ಧಾರ್ಮಿಕ, ಸಾಮಾಜಿಕ, ಸಭೆ-ಸಮಾರಂಭಗಳಿಗೆ ಈ ಭವನ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಮಾಜಿ ಸೈನಿಕರು ಸತ್ಕರಿಸಿದರು. ಪ್ರಭಾಶುಗರ್ಸ್‌ ನಿರ್ದೇಶಕ ಕೆಂಚನಗೌಡ ಪಾಟೀಲ, ಚಂದ್ರು ಬೆಳಗಲಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಶಿವಪ್ಪ ಮಾಲಗಾರ, ಅಧ್ಯಕ್ಷ ಚರಂತಯ್ಯ ಮಳ್ಳಿಮಠ, ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಮಿರ್ಜಿ, ಪದಾಧಿಕಾರಿಗಳಾದ ಅರ್ಜುನ ಕೋಳಾರ, ಮಹಾನಿಂಗ ಮಡಿವಾಳರ, ಭೀಮಪ್ಪ ಪಾಟೀಲ, ರಾಜು ದಬಾಡಿ, ಬಿ.ಸಿ.ಪೂಜೇರಿ, ರೂಪಾ ನಾಯಿಕ, ಲಕ್ಷ್ಮೀ ಪೂಜೇರಿ, ಪುಂಡಲೀಕ ಉಪ್ಪಾರ, ಮಲ್ಲಪ್ಪ ಜೋರಲಿ, ಬಸು ಹುಲಗನ್ನವರ, ರಾಜಶೇಖರ ಹಿರೇಮಠ, ಕೃಷ್ಣ ಕರಿಗಾರ, ಅರ್ಜುನ ಲೋಕೋಗೋಳ, ಲಲಿತಾ ನಾಗನೂರ, ರಾಜಶೇಖರ ಮೇತ್ರಿ, ಪುಂಡಲೀಕ ಕೋಟಿನತೋಟ, ಮಲ್ಲಪ್ಪ ಸಾಯನ್ನವರ ಇತರರಿದ್ದರು.