ಜಿಲ್ಲೆ

ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ.... ಸರ್ಕಾರಿ ಇಲಾಖೆ ಕೇಸರೀಕರಣ ಮಾಡೋದು ಎಷ್ಟು ಸರಿ?

ವಿಜಯಪುರ: ಸರ್ಕಾರಿ ಅಧಿಕಾರಿಗಳು, ಸರ್ಕಾರಿ ಇಲಾಖೆಗಳನ್ನೇ ಕೇಸರಿಕರಣ ಮಾಡೋದು ಎಷ್ಟು ಸರಿ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ‌.

ವಿಜಯದಶಮಿ ಹಿನ್ನೆಲೆ ರಾಜ್ಯದ ವಿವಿಧ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಕೇಸರಿ ಬಟ್ಟೆ ಧರಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಂದಗಿ ತಾಲೂಕಿನ ಮೋರಟಗಿಯಲ್ಲಿ

ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿನ ಪೊಲೀಸ್ ಠಾಣೆಗಳು ಕೇಸರಿಮಯವಾಗುತ್ತಿವೆ. ಎಲ್ಲೋ ಒಂದಿಬ್ಬರು ಬೇಕಾದ್ರೆ ಕೇಸರಿ ವಸ್ತ್ರಗಳನ್ನು ಹಾಕಿಕೊಳ್ಳಲಿ. ಆದರೆ ಇಡೀ ಠಾಣೆಯ ಎಲ್ಲಾ ಅಧಿಕಾರಿ, ಸಿಬ್ಬಂದಿ ಕೇಸರಿಯಾಗುತ್ತಿದ್ದಾರೆ.

ಈ ವಿಚಾರವನ್ನು ನಾನು ಟ್ವೀಟ್ ನಲ್ಲಿ ಖಂಡಿಸಿದ್ದೇನೆ. ಹೀಗಾಗಿ ಕೇಸರಿ ಜೊತೆ ತ್ರಿಶೂಲವನ್ನೂ ಕೈಯಲ್ಲಿ ಕೊಟ್ಟುಬಿಡಿ ಅಂತಾ ವ್ಯಂಗ್ಯವಾಗಿ ಹೇಳಿದ್ದೆ ಅಷ್ಟೆ. ಬಿಜೆಪಿ

ಪಕ್ಷದವರು, ಆರ್ ಎಸ್ ಎಸ್ ನವರು ಬೇಕಾದ್ದು ಮಾಡಿಕೊಳ್ಳಲಿ ಎಂದರು.