ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಿನ್ನೆ ನಿಧನರಾದ ಮಾಜಿ ಸಿಎಂ ವಿರೇಂದ್ರ ಪಾಟೀಲ್ ಹಿರಿಯ ಪುತ್ರಿ ಹಾಗೂ ಮಾಜಿ ಸಂಸದ ಡಾ. ಬಿ.ಜಿ.ಜವಳಿ ಅವರ ಪತ್ನಿ ಲಲಿತಾ ಜವಳಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನಡೆಯಲಿದೆ.
ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದರು ಲಲಿತಾ ಜವಳಿ ಅವರು ಕಳೆದ ಕೆಲ ತಿಂಗಳಿAದ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಗುರುವಾರ ಬೆಳಗ್ಗೆ ನಗರದಲ್ಲಿ ಕೊನೆಯುಸಿರೆಳದರು
ಇಂದು ಶುಕ್ರವಾರ ಮಧ್ಯಾಹ್ನ ೧೨-೩೦ ಗಂಟೆಯವರೆಗೂ ಕಲಬುರಗಿ ನಗರದ ಐವಾನ್-ಇ-ಶಾಹಿ ಪ್ರದೇಶದ ನೀಲಕಂಠರಾವ ಪಾಟೀಲ್ ಮಾರ್ಗದಲ್ಲಿರುವ ಮನೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತದೆ. ಬಳಿಕ ಪಾರ್ಥಿವ ಶರೀರವನ್ನು ಆಳಂದ ರಸ್ತೆಯಲ್ಲಿರುವ ಕಲಬುರಗಿ ತಾಲೂಕಿನ ಪಟ್ಟಣ ಕ್ರಾಸ್ ಸಮೀಪದಲ್ಲಿ (ಟೋಲ್ ನಾಕಾ ಬಳಿ) ಇರುವ ಡಾ.ಜವಳಿ ಅವರ ತೋಟದಲ್ಲಿ ಮಧ್ಯಾಹ್ನ ೨-೩೦ ಗಂಟೆಗೆ ಅಂತಿಮ ಸಂಸ್ಕಾರ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.